

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಸುಕ್ಷೇತ್ರ ನರೇಂದ್ರ ಗ್ರಾಮದ ಶ್ರೀ ಮೌನಯೋಗಿ ಮಹಾಂತ ಶಿವಯೋಗಿಗಳ 59ನೇ ಪುಣ್ಯಸ್ಮರಣೆ ಅಂಗವಾಗಿ ಮಳೆಪ್ಪಜ್ಜನ ಮಠದಲ್ಲಿ ಜ. 7ರಿಂದ 13ರವರೆಗೆ ಸಂಜೆ 6.30ಕ್ಕೆ ಆಧ್ಯಾತ್ಮಿಕ ಪ್ರವಚನ ಏರ್ಪಡಿಸಲಾಗಿದೆ. ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಯೋಗಿರಾಜೇಂದ್ರ ಖಾನಾಪುರ ಅವರು ಪ್ರವಚನ ನೀಡುವರು. ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತ ಮಠದ ಶ್ರೀ ಕುಮಾರ ವಿರೂಪಾಕ್ಷೇಶ್ವರ ಮಹಾಸ್ವಾಮೀಜಿ, ಹೊಸೂರ ಮಡಿವಾಳೇಶ್ವರ ಮಠದ ಶ್ರೀ ಗಂಗಾಧರ ಮಹಾಸ್ವಾಮೀಜಿ, ಬಳ್ಳಾರಿ ಕಮ್ಮರಚೇಡು ಸಂಸ್ಥಾನ ಮಠದ ಶ್ರೀ ಕಲ್ಯಾಣ ಮಹಾಸ್ವಾಮೀಜಿ, ಶಿರಕೋಳ ಹಿರೇಮಠದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯರು, ಅಮ್ಮಿನಭಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿ0ಗ ಶಿವಾಚಾರ್ಯ ಮಹಾಸ್ವಾಮೀಜಿ, ಮುಳಮುತ್ತಲದ ಶ್ರೀ ಆನಂದ ಮಹಾಸ್ವಾಮೀಜಿ, ಇತರರು ಸಾನ್ನಿಧ್ಯ ವಹಿಸುವರು. ಪ್ರತಿದಿನ ರಾತ್ರಿ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ. 13ರಂದು ಪ್ರವಚನ ಮಂಗಲೋತ್ಸವ, ಅನ್ನಪ್ರಸಾದ ಮಾಡಿಸಿದ ಭಕ್ತರಿಗೆ ಸನ್ಮಾನ ಮಾಡಲಾಗುವುದು ಎಂದು ಮಳೆಪ್ಪಜ್ಜನ ಮಠದ ಅಭಿವೃದ್ಧಿ ಟ್ರಸ್ಟ್ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.
* ನೇತ್ರಾಮೃತ: ಪುಣ್ಯಸ್ಮರಣೆ ಅಂಗವಾಗಿ ಜ. 13ರಂದು ಬೆಳಗ್ಗೆ 9.30ಕ್ಕೆ ಶ್ರೀ ಮಳೆಪ್ಪಜ್ಜನ ಮಠದಲ್ಲಿ ನೇತ್ರಾಮೃತ ಕಾರ್ಯಕ್ರಮ ಆಯೋಜಿಸಲಾಗಿದೆ. ಬಳ್ಳಾರಿ ಕಮ್ಮರಚೇಡು ಸಂಸ್ಥಾನ ಮಠದ ಶ್ರೀ ಕಲ್ಯಾಣ ಮಹಾಸ್ವಾಮೀಜಿ ಹಾಗೂ ಮಳೆಪ್ಪಜ್ಜನ ಮಠದ ಧರ್ಮಾಧಿಕಾರಿ ಶ್ರೀ ಸಂಗಮೇಶ್ವರ ಅಜ್ಜನವರು ಸಾನ್ನಿಧ್ಯ ವಹಿಸುವರು. ಕಣ್ಣಿನ ಹನಿ ಹಾಕುವ ಕಾರ್ಯಕ್ರಮವಕ್ಕೆ ಶ್ರೀ ಸವಿತಾನಂದ ಮಹಾಸ್ವಾಮೀಜಿ ಚಾಲನೆ ನೀಡುವರು. ನೇತ್ರಾಮೃತ ಹಾಕಿಸಿಕೊಳ್ಳುವುದರಿಂದ ಕಣ್ಣಿನ ವಿವಿಧ ಸಮಸ್ಯೆಗಳನ್ನು ಪರಿಹರಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.