

ಹುಬ್ಬಳ್ಳಿ: ಹೊರಕೇರಿ ಮಾಸ್ತರ ಪ್ರತಿಷ್ಠಾನ, ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿ, ಬಸವ ಪರಿಸರ ಸಂರಕ್ಷಣಾ ಸಮಿತಿ ವತಿಯಿಂದ ಇಲ್ಲಿಯ ಸಿದ್ದೇಶ್ವರ ಪಾರ್ಕ್‌ನ ಕೆಕೆ ಮಾರ್ಟ್‌ನಲ್ಲಿ ತ್ರಿವಿಧ ದಾಸೋಹಿ ತುಮಕೂರು ಸಿದ್ಧಗಂಗಾಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ 5ನೇ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಬಸವ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷ ಪ್ರೊ.ಎಸ್.ವಿ. ಪಟ್ಟಣಶೆಟ್ಟಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಅಧ್ಯಕ್ಷ ಪ್ರೊ. ಎಸ್.ಎಂ. ಸಾತ್ಮಾರ, ಕಾರ್ಯದರ್ಶಿ ಡಾ. ಸುರೇಶ ಹೊರಕೇರಿ, ಎಸ್.ಐ. ನೇಕಾರ, ಶಿವಯೋಗಿ ಮುಗಬಸ್ತ, ಸುನಂದಾ ಮುಗಭಸ್ತ, ನಿವೃತ್ತ ಗ್ರಂಥಪಾಲಕ ಡಾ. ಬಿ.ಎಸ್. ಮಾಳವಾಡ, ಚನ್ನಬಸಪ್ಪ ಧಾರವಾಡಶೆಟ್ಟರ, ರಾಜಶೇಖರ ಅರಳೇಶ್ವರಶೆಟ್ಟರ, ಲತಾ ನಾಡಗೌಡರ, ಧೀರಜ ಮೂಗಬಸ್ತ ಇತರರು ಇದ್ದರು.