ಮೈಸೂರಿನಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪುಣ್ಯಸ್ಮರಣೆ

9
Published on

ಮೈಸೂರು: ಟೀಂ ಮೈಸೂರು ತಂಡದಿಂದ ನಗರದ ಶ್ರೀ ಜಯಚಾಮರಾಜ ಒಡೆಯರ್ (ಹಾರ್ಡಿಂಜ್) ವೃತ್ತದಲ್ಲಿ ಮಂಗಳವಾರ ನಡೆದಾಡುವ ದೇವರು ಎಂದೇ ಹೆಸರಾಗಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಒಂದನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಮೇಣದ ಬತ್ತಿ ಹಚ್ಚಿ ಒಂದು ನಿಮಿಷ ಮೌನ ಆಚರಿಸಲಾಯಿತು.
ನಗರಪಾಲಿಕೆ ಮಾಜಿ ಸದಸ್ಯ ಸತೀಶ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ವಾಣೀಶ್, ಮುಖಂಡರಾದ ಬ್ರಹ್ಮಚಾರ್, ಟೀಂ ಮೈಸೂರು ತಂಡದ ಗೋಕುಲ್ ಗೋವರ್ಧನ್, ಕಿರಣ್ ಜೈರಾಮ್ಗೌಡ, ಯಶ್ವಂತ್, ಹಿರಿಯಣ್ಣ, ಮುರಳಿ, ಆನಂದ್, ಪ್ರಸನ್ನರಾಜ್ ಗುರು, ಮನೋಹರ್, ಸುನೀಲ್, ನವೀನ್, ಗಣೇಶ್, ಸುಮಂತ್, ಹೊಯ್ಸಳ, ಹರೀಶ್, ನವೀನ್, ಶೇಖರ್, ರಾಘವೇಂದ್ರ, ಸ್ಪಂದನಾ ಗ್ರೂಪ್‌ನ ಮಹೇಶ್, ಮೋಹನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net