ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವ, ದೇವರಹೊಸಪೇಟೆಯಲ್ಲಿ ಪ್ರಶಸ್ತಿ ಪ್ರದಾನ ಸೆ. 17ರಂದು

Pt. Puttaraj Gavaigalu
Published on

ಹಾನಗಲ್ಲ: ಪಂ.ಪುಟ್ಟರಾಜ ಕವಿ ಗವಾಯಿಗಳವರ 13ನೇ ಪುಣ್ಯಸ್ಮರಣೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಮತ್ತು ಸಂಗೀತ ಸಮಾರಾಧನೆ ಗವಾಯಿಗಳ ಹುಟ್ಟೂರಾದ ದೇವರ ಹೊಸಪೇಟೆ ಗ್ರಾಮದಲ್ಲಿ ಸೆ. 17ರಂದು ನಡೆಯಲಿವೆ.

ಕರ್ನಾಟಕ ಸಂಗೀತ ಅಕಾಡೆಮಿ, ಗದಗ ಪಂ.ಪುಟ್ಟರಾಜ ಗವಾಯಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಶಂಭುಲಿಂಗ ಶಿವಾಚಾರ್ಯರು, ಡಾ.ಕಲ್ಲಯ್ಯಜ್ಜನವರು, ಕೂಡಲದ ಗುರುಮಹೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿವೆ.

ಲಿಂ.ಕುಮಾರ ಶಿವಯೋಗಿಗಳ ತಾಯಿಯ ನೆನಪಿಗಾಗಿ ಮಾತೋಶ್ರೀ ನೀಲಾಂಬಿಕೆ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಗಂಗಾವತಿಯ ಶಾಂತಮ್ಮ ನರಸಿಂಹಪ್ಪ ಹೂಗಾರ, ಪಂ.ಪಂಚಾಕ್ಷರ ಗವಾಯಿಗಳ ತಾಯಿ ಮಾತೋಶ್ರೀ ನೀಲಮ್ಮನವರ ಪ್ರಶಸ್ತಿಯನ್ನು ಗದಗನ ಅನ್ನಪೂರ್ಣಮ್ಮ ಬಸವರಾಜ ಹಿಡ್ಕಿಮಠ, ಪಂ.ಪುಟ್ಟರಾಜ ಕವಿ ಗವಾಯಿಗಳ ತಾಯಿ ಮಾತೋಶ್ರೀ ಸಿದ್ದಮ್ಮನವರ ಪ್ರಶಸ್ತಿಯನ್ನು ಹೊಸೂರಿನ ವೃತ್ತಿ ರಂಗಭೂಮಿ ಕಲಾವಿದ ಮಹಾದೇವ ಗೂಟ್ಲಿ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ಮಾತೋಶ್ರೀ ಸಾವಿತ್ರಮ್ಮ ವೆಂಕಟಾಪುರಮಠ ಪ್ರಶಸ್ತಿಯನ್ನು ಶಿವಮೊಗ್ಗ ವೀರೇಶ್ವರ ಪುಣ್ಯಾಶ್ರಮದ ಪಂ.ಆರ್.ಟಿ. ಸಂಗಮೇಶ್ವರ ಗವಾಯಿಗಳಿಗೆ ನೀಡಲಾಗುತ್ತಿದೆ. ಇವರೊಂದಿಗೆ ವಿವಿಧ ಕ್ಷೇತ್ರಗಳ ಸಾಧಕರಾದ ಪಂ.ಹೇಮರಾಜ ಶಾಸ್ತ್ರಿಗಳು ಹಿರೇಮಠ, ಆದರ್ಶ ಶಿಕ್ಷಕರಾದ ಹನುಮಂತಪ್ಪ ಧೂಪದ, ಶಿವಪ್ಪ ಕಬನೂರ, ಮಾದನಹಿಪ್ಪರಗಿಯ ಸಾಹಿತಿ ಅಂಬಾದಾಸ್ ಜಮಾದಾರ, ಮಲಕಾಪುರದ ಗುಂಡಪ್ಪ ಕಬ್ಬಿಣದ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ

ಸೋಮಯ್ಯ ಹಿರೇಮಠ ಬಿಳೇಬಾಳ, ರಾಮಲಿಂಗ ಜಿಲ್ಲಾಪುರ, ವೆಂಕಟೇಶಕುಮಾರ ಅಲ್ಕೋಡ, ಜಗದೀಶ ನಾಗನೂರ, ಪುಟ್ಟರಾಜ ವೆಂಕಟಾಪುರಮಠ, ಮಲ್ಲೇಶ ಹೂಗಾರ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಶ್ರೀಶೈಲ ಚಿಕ್ಕಮಠ, ಕುಮಾರಸ್ವಾಮಿ ವೆಂಕಟಾಪುರಮಠ, ಶಿವಲಿಂಗಯ್ಯ ಚಿಣಮಗೇರ, ವೆಂಕನಗೌಡ ಹಗರಿಬೊಮ್ಮನಹಳ್ಳಿ, ಲಿಂಗರಾಜ ಕಬನೂರ, ಶೇಕಪ್ಪ ರೂಗಿ, ಭೀಮಾಶಂಕರ ಬಿದನೂರ, ಬಸವರಾಜ ಚಲಗೇರಾ, ಶಿವಯ್ಯ ಇಟಗಿಮಠ ಅವರಿಂದ ಸುಗಮ ಸಂಗೀತ ನಡೆಯಲಿದೆ. ದೂರದರ್ಶನ ಕಲಾವಿದ ಮಂಜುನಾಥ ಭಜಂತ್ರಿ ಅವರಿಂದ ಶಹನಾಯಿ ವಾದನ ಪ್ರಸ್ತುತಗೊಳ್ಳಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net