

ಮೈಸೂರು: ನಗರದ ರಾಜಕುಮಾರ್ ಕಲಾ ಸೇವಾ ಟ್ರಸ್ಟ್‌ನಿಂದ ರಾಜಕುಮಾರ್ ಅವರ 96ನೇ ಜಯಂತಿ ಪ್ರಯುಕ್ತ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಏ.23ರಿಂದ 30ರವರೆಗೆ ಪ್ರತಿ ದಿನ ಸಂಜೆ 5ರಿಂದ ರಾತ್ರಿ 9.30ರವರೆಗೆ ಚಲನಚಿತ್ರ ಗೀತೆ ಗಾಯನದ ನೆನಪಿನೋತ್ಸವ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಸ್ಥಾಪಕ ಬಿ.ಎಸ್.ಜಯರಾಮರಾಜು ತಿಳಿಸಿದರು.
ಏಳುದಿನಗಳ ಉತ್ಸವದಲ್ಲಿ 300 ಗೀತೆಗಳನ್ನು ವಿವಿಧ ಗಾಯಕರು ಹಾಡುವರು. ಏ. 23ರಂದು ಪಿ.ಬಿ. ಶ್ರೀನಿವಾಸ್ ಅವರು ರಾಜಕುಮಾರ್ ಚಿತ್ರಗಳಿಗೆ ಹಾಡಿರುವ ಹಾಡುಗಳನ್ನು ಹಾಡಲಾಗುವುದು. ಏ.24ರಂದು ಜನ್ಮದಿನದ ಪ್ರಯುಕ್ತ 10 ಹಿರಿಯ ಕಲಾವಿದರಿಗೆ ಸನ್ಮಾನ ಆಯೋಜಿಸಲಾಗಿದೆ. ಪ್ರತಿದಿನವೂ ಗಾಯನಕ್ಕೂ ಮುನ್ನ ಪ್ರಮುಖ ಅತಿಥಿಗಳೊಂದಿಗೆ 15 ನಿಮಿಷಗಳ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಆಗಮಿಸಿ ಪ್ರೋತ್ಸಾಹಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಟ್ರಸ್ಟ್ ಗಾಯಕರದ ಸುಧೀಂದ್ರ, ಬಾಲುಪ್ರಕಾಶ, ಸರ್ವಮಂಗಳಾ, ಲತಾ ಬಾಲಕೃಷ್ಣ ಇದ್ದರು.