

ಬನ್ನೂರು: ಪಟ್ಟಣದಲ್ಲಿ ಚಿತ್ರನಟ ಡಾ.ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಸ್‌ಆರ್‌ಪಿ ರಸ್ತೆಯ ಹಾಲಿನ ಡೇರಿ ಮುಂಭಾಗದಲ್ಲಿ ಶುಕ್ರವಾರ ಅಂಬರೀಶ್ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ದೀಪ ಬೆಳಗಿ, ಮತ್ತೊಮ್ಮೆ ಕನ್ನಡ ನಾಡಲ್ಲಿ ಹುಟ್ಟಿ ಬನ್ನಿ ಅಣ್ಣ ಎಂದು ಜೈಕಾರ ಹಾಕಲಾಯಿತು.
ನಂತರ ಅಭಿಮಾನಿಗಳು ಮೌನಾಚರಣೆ ಮಾಡಿದರು. ಅಂಬರೀಶ್ ಅಭಿಮಾನಿ ಬಳಗದ ಜಿಲ್ಲಾ ಗೌರವಾಧ್ಯಕ್ಷ ವೆಂಕಟೇಶ್, ಕರ್ನಾಟಕ ರಾಜ್ಯ ರೈತ ಸಂಘದ ಹೋಬಳಿ ಅಧ್ಯಕ್ಷ ಹುಚ್ಚೇಗೌಡ, ನಂದೀಶ್, ಸುರೇಶ್, ಆನಂದ್, ಪ್ರಸನ್ನ, ನಾಗೇಂದ್ರ, ರವಿ, ಬಸುರಾಜು, ಬಾಬುನಂದನ್, ಟೈಲರ್ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.