ಚಾರುಶ್ರೀಗಳ ಪ್ರಥಮ ವರ್ಷದ ಪುಣ್ಯಸ್ಮರಣೆ

IMG_20240410_110656
ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದ ತಪ್ಪಲಿನಲ್ಲಿರುವ ನಿಷಿಧಿ ಸ್ಥಳದಲ್ಲಿ ವಿಶೇಷ ಪೂಜೆ ನೆರವೇರಿತು. ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಕಂಬದಹಳ್ಳಿ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಇತರರಿದ್ದರು.
Published on

ಶ್ರವಣಬೆಳಗೊಳ: ಶ್ರೀಕ್ಷೇತ್ರ ಶ್ರವಣಬೆಳಗೊಳ ಜೈನ ಮಠದ ಹಿಂದಿನ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಬುಧವಾರ ನೆರವೇರಿತು.


ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ನೇತೃತ್ವದಲ್ಲಿ ಚಂದ್ರಗಿರಿ ತಪ್ಪಲಿನಲ್ಲಿರುವ ಶ್ರೀಗಳ ನಿಷಿಧಿ ಸ್ಥಳದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು. ಸ್ವಾಮೀಜಿ ಅವರ ಪಾದುಕೆಗಳನ್ನು ಪ್ರತಿಷ್ಠಾಪಿಸಿ ಪಂಚಾಮೃತ ಅಭಿಷೇಕ, ಅಷ್ಟವಿಧಾರ್ಚನೆ ಪೂಜೆ, ಜಯಮಾಲಾ, ಮಹಾಮಂಗಳಾರತಿ ಹಾಗೂ ಪುಷ್ಪಾರ್ಚನೆ ನೆರವೇರಿಸಲಾಯಿತು.
ಕಂಬದಹಳ್ಳಿ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪೂಜಾ ವಿಧಿವಿಧಾನಗಳನ್ನು ನಂದಕುಮಾರ್ ಶಾಸ್ತ್ರಿ, ಜಿನೇಶ್‌ಕುಮಾರ್ ಶಾಸ್ತ್ರಿ ನಡೆಸಿಕೊಟ್ಟರು.


ನಂತರ ಶ್ರವಣಬೆಳಗೊಳದಿಂದ ಚನ್ನರಾಯಪಟ್ಟಣಕ್ಕೆ ಹೋಗುವ ಬಸ್ ನಿಲ್ದಾಣ ಮಾರ್ಗದ ರಸ್ತೆಗೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ರಸ್ತೆ ಎಂದು ನಾಮಕರಣ ಮಾಡಿ, ನಾಮಫಲಕವನ್ನು ಶ್ರೀಗಳು ಅನಾವರಣ ಮಾಡಿದರು.


ಶ್ರೀ ದಿಗಂಬರ ಜೈನ ಸಮಾಜದ ಅಧ್ಯಕ್ಷ ಜಿ.ಪಿ.ಪದ್ಮಕುಮಾರ್, ಕಾರ್ಯದರ್ಶಿ ಎಸ್.ಪಿ.ಭಾನುಕುಮಾರ್ ಹಾಗೂ ಪದಾಧಿಕಾರಿಗಳು, ಕುಷ್ಮಂಡಿನಿ ಮಹಿಳಾ ಸಮಾಜದ ಅಧ್ಯಕ್ಷೆ ಮಹಾಲಕ್ಷ್ಮೀ ಹಾಗೂ ಪದಾಧಿಕಾರಿಗಳು, ಮುಖಂಡರಾದ ಸುದರ್ಶನ್ ಜೈನ್, ಡಾ.ಬಿ.ಆರ್.ಯುವರಾಜ್, ಎಸ್.ಕೆ. ರಾಘವೇಂದ್ರ, ಎಸ್.ಆರ್.ರಮೇಶ್, ಭಾರತಿ ಚಂದ್ರೇಗೌಡ, ಎಸ್.ಎಂ.ಲಕ್ಷ್ಮಣ್, ಎಸ್.ಅರ್.ಲೋಕೇಶ್, ಎನ್.ಆರ್.ವಾಸು, ಯಶಸ್ ಜೈನ್, ಚಂದ್ರಶೇಖರ್, ಅಫ್ತಾಬ್, ಸಂಜಿತಾ ರೂಪೇಶ್, ಶ್ರೇಯಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net