ದಿವಂಗತ ನಟ ಅಂಬರೀಷ್ ಅಜಾತಶತ್ರು: ಸಂಘದ ರಾಜ್ಯಾಧ್ಯಕ್ಷ ಸೋಮಶೇಖರ್ ಹೇಳಿಕೆ

Commemoration of Ambareesh Mandya
Published on

ಮಂಡ್ಯ: ದಿವಂಗತ ನಟ ಅಂಬರೀಷ್ ಅವರು ಅಜಾತಶತ್ರುವಾಗಿ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ. ಅವರ ನೆನಪು ಸದಾ ನಮ್ಮ ಜತೆಯಲ್ಲಿರುತ್ತದೆ ಎಂದು ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ತಿಳಿಸಿದರು.

ನಗರದ ಜೆ.ಸಿ.ವೃತ್ತದಲ್ಲಿ ದಿ.ಅಂಬರೀಷ್ ಅವರ 6ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬರೀಷ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಕಂಡ ಅಪ್ರತಿಮ ನಾಯಕ ಅಂಬರೀಷ್ ಅವರು ಕನ್ನಡಿಗರ ಮನಸ್ಸು ಗೆದ್ದು, ಕನ್ನಡ ಚಿತ್ರರಂಗದಲ್ಲಿ ಅಜಾತಶತ್ರುವಾಗಿ ರಾಜಕೀಯದಲ್ಲಿ ಹ್ಯಾಟ್ರಿಕ್ ಸಂಸದರಾಗಿ, ವಸತಿ ಸಚಿವರಾಗಿ ಯಾವುದೇ ರೀತಿಯ ಕಪ್ಪುಚುಕ್ಕೆ ಇಲ್ಲದೆ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಅಂಬರೀಶ್ ಅವರು ವಸತಿ ಖಾತೆ ಸಚಿವರಾಗಿ ಕೆಲಸ ಮಾಡಿದಾಗ ಕೇಂದ್ರ ಸರ್ಕಾರದಿಂದ ಅವರಿಗೆ ಉತ್ತಮ ಸಚಿವ ಎಂದು ಗೋಲ್ಡ್ ಮೆಡಲ್ ಬಂದಿತು. ಆರನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಜಿಲ್ಲೆಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.

ಮಮತೆಯ ಮಡಿಲು ಸಂಸ್ಥೆಯ ಮಂಗಲ ಎಂ.ಯೋಗೇಶ್, ಕೆ.ಪಿ.ಅರುಣ ಕುಮಾರಿ, ಅಂಬರೀಷ್ ಅಭಿಮಾನಿ ಹನುಗನಹಳ್ಳಿ ರಾಜು, ಶ್ರೀಧರ್, ಹರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net