ರಾಧಾ ಶೆಣೈ ಶಾಲೆಯಲ್ಲಿ ಪುಣ್ಯಸ್ಮರಣೆ

konchadi
Published on

ಗಂಗೊಳ್ಳಿ: ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿಯ ಹರಿಕಾರ ದಿವಂಗತ ಕೊಂಚಾಡಿ ಗಣಪತಿ ಶೆಣೈ ಅವರ 6ನೇ ವರ್ಷದ ಪುಣ್ಯಸ್ಮರಣೆ ನಡೆಯಿತು.

ದಿ.ಗಣಪತಿ ಶೆಣೈ ಭಾವಚಿತ್ರಕ್ಕೆ ಪ್ರಭಾರ ಮುಖ್ಯ ಶಿಕ್ಷಕಿ ಯಶೋದಾ ಪುಷ್ಪನಮನ ಸಲ್ಲಿಸಿದರು. ಕೆಲವು ವಿದ್ಯಾರ್ಥಿಗಳು ದಿ.ಗಣಪತಿ ಶೆಣೈ ಅವರ ಭಾವಚಿತ್ರ ಬಿಡಿಸುವುದರ ಮೂಲಕ, ಅವರ ಕುರಿತು ಕವನ ರಚಿಸುವುದರ ಮೂಲಕ ಗೌರವ ಸಮರ್ಪಿಸಿದರು. ಶಿಕ್ಷಕರು, ವಿದ್ಯಾರ್ಥಿಗಳೆಲ್ಲರೂ ಪುಷ್ಪಾರ್ಚನೆ ಮೂಲಕ ಭಾವಪೂರ್ಣವಾಗಿ ನುಡಿ ನಮನಗೈದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net