ಸ್ವಯಂ ಉದ್ಯೋಗದಿಂದ ನೆಮ್ಮದಿ

K HALLI TARABETI 09 (1)
Published on

ಕೊಂಡ್ಲಹಳ್ಳಿ: ಗ್ರಾಮೀಣ ಪ್ರದೇಶದ ಜನರ ಪ್ರಗತಿಗೆ ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ಕಾಳಜಿ ಹೊಂದಿದ್ದು, ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ವತಿಯಿಂದ ಅನೇಕ ಜನಪರ ಕಾರ್ಯ ಕೈಗೊಂಡಿದ್ದಾರೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಡಿ.ಷಡಕ್ಷರಪ್ಪ ಹೇಳಿದರು.

ಯೋಜನೆಯ ಸದಸ್ಯರಿಗೆ ಇಲ್ಲಿನ ಸಾಲೇಶ್ವರ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸ್ವಯಂ ಉದ್ಯೋಗ ಪ್ರೇರಣ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಗೃಹ ಕೈಗಾರಿಕೆಗಳನ್ನು ಕೈಗೊಳ್ಳುವುದರಿಂದ ಸರ್ಕಾರ ಮತ್ತು ಶ್ರೀಕ್ಷೇತ್ರ ಯೋಜನೆಯಿಂದ ಸಹಾಯಧನ,ನೆರವು ಪಡೆಯಲು ಅವಕಾಶವಿದೆ. ಇಂತಹ ತರಬೇತಿಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದರೆ ಸ್ವಯಂತ ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕ ಸಬಲತೆ ಸಾಧಿಸಬಹುದು ಎಂದರು.

ಯೋಜನೆಯ ತಾಲೂಕು ಅಧಿಕಾರಿ ಶಶಿಧರ್ ಮಾತನಾಡಿ, ಶ್ರೀಕ್ಷೇತ್ರ ಯೋಜನೆಯ ಜ್ಞಾನವಿಕಾಸ ಕೇಂದ್ರದ ಸದಸ್ಯರಲ್ಲಿ ಕೌಶಲ ಹೆಚ್ಚಿಸಲು ಇಂತಹ ತರಬೇತಿ ಶಿಬಿರ ಆಯೋಜಿಸಲಾಗುತ್ತಿದ್ದು, ಜನರು ಸಣ್ಣದಾಗಿ ಸ್ವಂತ ಉದ್ಯಮ ನಡೆಸುವತ್ತ ಗಮನಹರಿಸಬೇಕು ಎಂದು ಹೇಳಿದರು.

ಚಿತ್ರದುರ್ಗ ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕ ಉದಯ್‌ಕುಮಾರ್, ಒಕ್ಕೂಟದ ಅಧ್ಯಕ್ಷೆ ಟಿ.ಶೋಭಾ, ಜ್ಞಾನ ವಿಕಾಸ ಯೋಜನೆಯ ಸಮನ್ವಯಧಿಕಾರಿ ಅಂಬಿಕಾ, ವಲಯ ಮೇಲ್ವಿಚಾರಕ ಸಂತೋಷ್‌ಕುಮಾರ್, ಸೇವಾ ಪ್ರತಿನಿಧಿಗಳಾದ ಪಾರ್ವತಮ್ಮ, ಭಾಗ್ಯಮ್ಮ,ನಾಗರತ್ನಮ್ಮ, ಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net