

ಬಂಟ್ವಾಳ: ಬಾಲಕಿಯೋರ್ವಳ ಫೇಸ್‌ಬುಕ್ ಲೈವ್‌ಗೆ ಅಸಭ್ಯ ಕಮೆಂಟ್ ಮಾಡಿರುವ ಆರೋಪಿ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪೋಕ್ಸೋಅನ್ವಯ ಪ್ರಕರಣ ದಾಖಲಾಗಿದೆ.
ಮುನಿರಾಜ ಪಿ. ಎಂಬಾತನ ವಿರುದ್ಧ ಕೇಸು ದಾಖಲಾಗಿದ್ದು, ಈತನಿಗಾಗಿ ಬಂಟ್ವಾಳ ನಗರ ಠಾಣೆ ಅಪರಾಧ ವಿಭಾಗದ ಎಸ್‌ಐ ಕಲೈಮಾರ್ ಮತ್ತವರ ತಂಡ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮೋಹನ ದಾಸ್ ಕೊಟ್ಟಾರಿ ಎಂಬುವರು ಈ ಬಗ್ಗೆ ಕೇಸು ದಾಖಲಿಸಿದ್ದಾರೆ.
ಕೋವಿಡ್-19ಹಿನ್ನೆಲೆಯಲ್ಲಿ ಮಕ್ಕಳಿಗಾಗಿ ಫೇಸ್‌ಬುಕ್ ಸಾಂಸ್ಕೃತಿಕ ಲೈವ್ ಪೇಜ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಸಂದರ್ಭ ಆರೋಪಿ ಮುನಿರಾಜ ಪಿ. ತನ್ನ ಮೊಬೈಲ್ ನಂಬರ್‌ನಿಂದ ಬಾಲಕಿಯೋರ್ವಳಿಗೆ ಅಶ್ಲೀಲ ಪದಗಳನ್ನು ಬಳಸಿ ಕಮೆಂಟ್ ಮಾಡಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿ ಮೊಬೈಲ್‌ಗೆ ಕರೆ ಮಾಡಿದಾಗ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.