ನಾಳೆ ಬೆಳಗಾವಿಯಲ್ಲಿ ಹಾಸ್ಯ ಭಾಷಣ, ನಾಟಕಗಳ ಪ್ರದರ್ಶನ

Screenshot_2023_0810_202756.png
Published on

ಬೆಳಗಾವಿ :  ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಹಯೋಗದಲ್ಲಿ ಆ.12ರಂದು ಶನಿವಾರ ಸಂಜೆ 4.30 ಕ್ಕೆ  ಸಾಹಿತ್ಯ ಭವನದಲ್ಲಿ ಹಾಸ್ಯ ಭಾಷಣ ಹಾಗೂ ವಿವಿಧ ನಾಟಕಗಳ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರೊ.ಜಿ.ಕೆ.ಕುಲಕರ್ಣಿ ಹಾಸ್ಯ ಭಾಷಣ ಮಾಡಲಿದ್ದು,ರಂಗಸಂಪದ ಹಾಗೂ ಹಾಸ್ಯಕೂಟ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಿರುನಾಟಕ ಸ್ಪರ್ಧೆಯಲ್ಲಿ ಮೊದಲ ಐದು ಬಹುಮಾನ ಪಡೆದ ನಾಟಕಗಳ ಪ್ರದರ್ಶನ ಜರುಗಲಿದೆ. ಅರವಿಂದ ಪಾಟೀಲ ರಚಿಸಿ, ನಿರ್ದೇಶಿಸಿದ ‘ಕ್ಯಾಪ್ಟನ್ ವಿಕ್ರಮ ಬಾತ್ರಾ’, ಡಾ. ನಿರ್ಮಲಾ ಬಟ್ಟಲ ರಚಿಸಿ, ನಿರ್ದೇಶಿಸಿದ ‘ಸತ್ತವರು ಹೇಳಿದ ಕಥೆ’, ಚಂದ್ರಿಕಾ ಕುಲಕರ್ಣಿ ರಚಿಸಿ ನಿರ್ದೇಶಿಸಿದ ‘ಸಾಮ್ರಾಟ ಅಶೋಕ’, ರಾಹುಲ ಮೋಹನದಾಸ ಬರೆದು ನಿರ್ದೇಶಿಸಿರುವ ‘ಸಾಕ್ಷಾತ್ಕಾರ’ ಹಾಗೂ ಶೀತಲ ರಾಜಪುರೋಹಿತ ರಚಿಸಿ ನಿರ್ದೇಶಿಸಿದ ‘ಟೊಪ್ಪಿಗೆ ಮಾರುವವ ಮತ್ತು ಮಂಗಗಳು’ ಎಂಬ ಕಿರುನಾಟಕಗಳ ಪ್ರದರ್ಶನ ನಡೆಯಲಿದೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net