22ರಿಂದ ಬೆಳಗಾವಿಯಲ್ಲಿ ಹಾಸ್ಯ ನಾಟಕ ಪ್ರದರ್ಶನ ಸ್ಪರ್ಧೆ

0d7497a08eee52f07d080dcff19783f6-900x629.jpg
Published on

ಬೆಳಗಾವಿ : ರಂಗಸಂಪದ ಬೆಳಗಾವಿ ಮತ್ತು ಹಾಸ್ಯಕೂಟ ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಿರು ನಾಟಕ ಸ್ಪರ್ಧೆ ನಮ್ಮ ಬೆಳಗಾವಿಯ ನುರಿತ ಮತ್ತು ಹೊಸ ಕಲಾವಿದರಿಗೆ ಉತ್ತಮ ಅವಕಾಶ ಕಲ್ಪಿಸುವ ಉದ್ದೇಶದಿಂದ ಇದೇ ತಿಂಗಳ ದಿ.22 ಶನಿವಾರ ಸಂಜೆ ಸರಿಯಾಗಿ 4ಕ್ಕೆ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಹಾಸ್ಯ ಕಿರುನಾಟಕ/ಪ್ರಹಸನ ಸ್ಪರ್ಧೆ ಏರ್ಪಡಿಸಿದ್ದಾರೆ.
 

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕನಿಷ್ಟ 2 ಮತ್ತು ಗರಿಷ್ಠ 5 ಜನ ಕಲಾವಿದರು ಮಾತ್ರ  ಭಾಗವಹಿಸಬೇಕು. ಅವಧಿಯು ಕನಿಷ್ಠ 5 ಮತ್ತು ಗರಿಷ್ಠ 10 ನಿಮಿಷಗಳಿರಬೇಕು.  ಜು.20 ಸಂಜೆ 6ರೊಳಗೆ ತಂಡದ ಸದಸ್ಯರ ಹೆಸರು ಮತ್ತು ಮೊಬೈಲ್ ನಂಬರ ಸಹಿತ ಡಾ.ಅರವಿಂದ ಕುಲಕರ್ಣಿ ಅಧ್ಯಕ್ಷರು ರಂಗಸಂಪದ ಬೆಳಗಾವಿ ಇವರ ಮೊಬೈಲ್ ನಂ.9845025638 ವಾಟ್ಸಪ್ ಮೂಲಕ ಕಳಿಸಬೇಕು.ಮೊದಲು ಹೆಸರು ನೋಂದಾಯಿಸಿಕೊಳ್ಳುವ 12 ತಂಡಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು.  ಪ್ರಥಮ. ರೂ. 5000.00, ದ್ವಿತೀಯ. ರೂ. 3000.00 ಮತ್ತು  ತೃತೀಯ. ರೂ. 2000.00 ಹೀಗೆ ಮೂರು ನಗದು ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9845025638/9448947343/ 9448093589ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net