

ಹಳಿಯಾಳ: ಪಟ್ಟಣದ ಕೆಎಲ್‌ಎಸ್‌ವಿಡಿಐಟಿ ಮಹಾವಿದ್ಯಾಲಯವು ಕಾಮೆಡ್ ಕೇರ್ಸ್ ಸಂಸ್ಥೆಯೊಂದಿಗೆ ಏ.22ರಂದು ಒಡಂಬಡಿಕೆ ಮಾಡಿಕೊಂಡಿದೆ ಎಂದು ಪ್ರಾಚಾರ್ಯ ಡಾ. ವಿ ಎ ಕುಲಕರ್ಣಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಹುಬ್ಬಳ್ಳಿ ಸೆಂಟ್ರಲ್ ಶಾಸಕ ಮಹೇಶ ಟೆಂಗಿನಕಾಯಿ, ಕೆಎಲ್‌ಇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಅಶೋಕ್ ಶೆಟ್ಟರ್ ಅವರ ಸಮ್ಮುಖದಲ್ಲಿ ಕಾಮೆಡ್ ಕೇರ್ಸ್ ಸಂಸ್ಥೆಯ ಚೇರ್ಮನ್ ಡಾ. ಎಂ ಆರ್. ಜಯರಾಮ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ. ಮುರಳೀಧರ ಹಾಗೂ ಮಹಾವಿದ್ಯಾಲಯದ ಪರವಾಗಿ ಪ್ರಾಚಾರ್ಯ ಡಾ. ಮಹೇಂದ್ರ ದೀಕ್ಷಿತ್, ಪ್ರೊ. ಸೂರಜ್ ಕಡ್ಲಿ ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಂಡರು.
ವಿದ್ಯಾರ್ಥಿಗಳಿಗೆ ಕೈಗಾರಿಕಾ ಕ್ಷೇತ್ರ ಬಯಸುವ ಕೌಶಲಗಳನ್ನು ನೀಡಿ ಉದ್ಯೋಗಾವಕಾಶ ಸೃಷ್ಟಿಸಲು ಮಹಾವಿದ್ಯಾಲಯವು ಒಡಂಬಡಿಕೆ ಮಾಡಿಕೊಂಡಿದೆ ಎಂದು ಕುಲಕರ್ಣಿ ವಿವರಿಸಿದ್ದಾರೆ.
ಕಾಮೆಡ್ ಕೇರ್ಸ್ ವಿದ್ಯಾರ್ಥಿಗಳಿಗೆ ನೂತನ ತಂತ್ರಜ್ಞಾನ, ಸಾಫ್ಟ್‌ವೇರ್‌ಗಳ ಕುರಿತು ಇಂಟರ್ನ್‌ಶಿಪ್, ಪ್ರಾಜೆಕ್ಟ್ ಗಳ ಪ್ರಾಯೋಗಿಕ ಜ್ಞಾನವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.