ನಿಯಮಿತವಾಗಿ ಶಾಲೆಗೆ ಹೋಗಿ ಬನ್ನಿ

NRGL BAGS
Published on

ನರೇಗಲ್ಲ: ವಿದ್ಯಾರ್ಥಿಗಳು ನಿಯಮಿತವಾಗಿ ಶಾಲೆಗೆ ಬಂದರೆ ನಿತ್ಯದ ಅಭ್ಯಾಸ ತಿಳಿಯುತ್ತದೆ. ಇದರಿಂದ ಜಾಣರಾಗಬಹುದು ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಹೇಳಿದರು.

ಪಟ್ಟಣದ ಕೋಡಿಕೊಪ್ಪದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಬ್ಯಾಗ್, ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು. ಅಂದಿನ ಪಾಠ ಅಂದೇ ಮಾಡುವುದರಿಂದ ಏನಾದರೂ ಸಂಶಯಗಳು ಬಂದರೆ ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳಬೇಕು ಎಂದರು.

ಎಸ್​ಡಿಎಂಸಿ ಅಧ್ಯಕ್ಷ ಸೋಮಪ್ಪ ಹನುಮಸಾಗರ, ನಿವೃತ್ತ ಶಿಕ್ಷಕ ಬಿ.ಜಿ. ಹಳ್ಳೂರ, ಕುಬೇರಪ್ಪ ನಾಶಿಪುಡಿ, ಮುಖ್ಯ ಶಿಕ್ಷಕ ಸಂಗಯ್ಯ ಪ್ರಭುಸ್ವಾಮಿಮಠ, ಶಿಕ್ಷಕರಾದ ಬಿ.ಎಸ್. ಕರಮುಡಿ, ಜೆ.ಡಿ. ಶಾಲದಾರ, ಶಿಕ್ಷಕಿಯರಾದ ಎಲ್.ಎಸ್. ಶಿವಪ್ಪಗೌಡರ, ಎಲ್.ಎಸ್. ಗಂಗಾಪೂರ, ಎನ್.ಎ. ಹುಬ್ಬಳೀಕರ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net