

ಹಗರಿಬೊಮ್ಮನಹಳ್ಳಿ: ತಾಲೂಕಿನಾದ್ಯಂತ ಬನ್ನಿ ಮುಡಿಯುವ ಮೂಲಕ ವಿಜಯದಶಮಿ ಹಬ್ಬಕ್ಕೆ ತೆರೆ ಎಳೆಯಲಾಯಿತು. ನವರಾತ್ರಿ ಹಿನ್ನೆಲೆಯಲ್ಲಿ ವಿವಿಧ ದೇವಸ್ಥಾನಗಳಲ್ಲಿ ಶ್ರೀ ದೇವಿ ಪುರಾಣ ಪ್ರವಚನಗಳು ನಡೆದವು. ಪಟ್ಟಣದ ಅಂಬಾಭವಾನಿ ದೇಗುಲ, ಶ್ರೀ ಹಾಲಸ್ವಾಮಿ ಮಠ, ನೇಕಾರ ಕಾಲನಿಯ ಬನಶಂಕರಿ, ಕೆವಿಒಆರ್ ಕಾಲನಿಯ ಪತ್ರಿಬಸವೇಶ್ವರ ದೇಗುಲ, ಶ್ರೀ ಕನ್ಯಕಾಪರಮೇಶ್ವರಿ ದೇಗುಲ, ತಂಬ್ರಹಳ್ಳಿಯ ವೀರಭದ್ರೇಶ್ವರ ದೇವಾಲಯ, ಮೈಲಾರಲಿಂಗೇಶ್ವರ ದೇಗುಲ, ನಂದಿಪುರದ ಶ್ರೀ ದೊಡ್ಡ ಬಸವೇಶ್ವರ ದೇವಾಲಯ, ಹಂಪಸಾಗರದ ಮಹಾದೇವ ತಾತಾನ ಮಠದಲ್ಲಿ ನವರಾತ್ರಿ ಸಂಭ್ರಮದಿಂದ ಜರುಗಿತು. ಗುರುವಾರ ಈ ಎಲ್ಲ ದೇಗುಲಗಳಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿಸಿ ಭಕ್ತರು ಬನ್ನಿ ತಗೊಂಡು ಬಂಗಾರದಂಗ ಇರೋಣ ಎಂದು ಶುಭ ಕೋರಿದರು.