ಲಕ್ಷೆ್ಮೕಶ್ವರದಲ್ಲಿ ರಂಗಿನೋಕುಳಿ ಸಂಭ್ರಮ

LXR HOLI
Published on

ಲಕ್ಷ್ಮೇಶ್ವರ: ತಾಲೂಕಿನ ಅಡರಕಟ್ಟಿ, ಹರದಗಟ್ಟಿ, ಮಂಜಲಾಪೂರ, ಸುವರ್ಣಗಿರಿ ತಾಂಡೆ, ಬಟ್ಟೂರ, ರಾಮಗೇರಿ, ಬಾಲೆಹೊಸೂರ, ಯಳವತ್ತಿ, ದೊಡ್ಡೂರ ಸೇರಿ ತಾಲೂಕಿನ 15 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶುಕ್ರವಾರ ಹೋಳಿ ಹುಣ್ಣಿಮೆ ಪ್ರಯುಕ್ತ ಯುವಕರು, ಮಕ್ಕಳು ಪರಸ್ಪರ ಬಣ್ಣ ಎರಚಿ ರಂಗಿನೋಕಳಿಯಲ್ಲಿ ಮಿಂದೆದ್ದರು.

ಬೆಳ್ಳಂಬೆಳಿಗ್ಗೆ ಮಕ್ಕಳು ಹೆಣ್ಣು-ಗಂಡು ಬೇಧಬಾವವಿಲ್ಲದೇ ಬಣ್ಣದ ನೀರು ತುಂಬಿದ್ದ ಪಿಚಕಾರಿ ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ಹಿಡಿದು ಪರಸ್ಪರ ಬಣ್ಣ ಎರಚಿ ಖುಷಿಪಟ್ಟರು. ಸುಡುಬಿಸಿಲು ಲೆಕ್ಕಿಸದೇ ಹಲವೆಡೆ ಅಣುಕು ಶವಯಾತ್ರೆ, ಆಕರ್ಷಕ ಉಡುಗೆ ತೊಟ್ಟು ಹಲಗೆಯ ತಾಳಕ್ಕೆ ತಕ್ಕಂತೆ ಕುಣಿದರು. ಓಕಳಿ ಬಳಿಕ ಕಾಮನದಹನದ ಸಂಪ್ರದಾಯ ನೆರವೇರಿಸಲಾಯಿತು.

ಶನಿವಾರವೂ ಕೆಲವು ಗ್ರಾಮಗಳಲ್ಲಿ ಓಕಳಿ ಹಬ್ಬ ನಡೆಯಲಿದೆ. ಲಕ್ಷ್ಮೇಶ್ವರ ಮತ್ತು ಶಿಗ್ಲಿಯಲ್ಲಿ ಮಾ. 18ಕ್ಕೆ ರಂಗಪಚಮಿ ಆಚರಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net