ಕಮತಪುರ ಉತ್ಸವಕ್ಕೆ ವರ್ಣರಂಜಿತ ತೆರೆ

Colorful opening to Kamatpur festival
ಬೆಳ್ಳಿ ತುಲಾಭಾರದಿಂದ ದೊರೆತ 65 ಲಕ್ಷ ರೂಗಳನ್ನು ಬ್ಯಾಂಕಿನಲ್ಲಿ ಡಿಪಾಜಿಟ್ ಮಾಡಿದ ಪ್ರತಿಯನ್ನು ಪೂಜ್ಯರು ಬುಧವಾರ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಠದ ಭಕ್ತರಿಗೆ ಹಸ್ತಾಂತರಿಸಿದರು. ಮುರಗೇಶ ಕಡ್ಲಿಮಟ್ಟಿ, ಯಲ್ಲಪ್ಪ ಮಜ್ಜಗಿ, ಹನಮಂತ ಇಂಜಿನೇರಿ, ರಮೇಶ ಜಮಜಂಡಿ, ಹುಚ್ಚಪ್ಪ ಸಿಂಹಾಸನ, ಮಹಾಂತೇಶ ಅಂಗಡಿ, ಶ್ರೀಕಾಂತ ಹಾಸಲಕರ, ಸಂಗಣ್ಣ ಮನ್ನಿಕೇರಿ, ಯಲ್ಲಪ್ಪ ಜಗ್ಗಲ ಮತ್ತಿತರರಿದ್ದಾರೆ.
Published on

ಕಮತಗಿ: ಪಟ್ಟಣದ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ 13ನೇ ಪೀಠಾಧಿಪತಿ ಹುಚ್ಚೇಶ್ವರ ಸ್ವಾಮೀಜಿ ಅವರ ಪಟ್ಟಾಧಿಕಾರದ ರಜತ ಮಹೋತ್ಸವ, ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ವಜ್ರ ಮಹೋತ್ಸವ ಹಾಗೂ ಕಮತಪುರ ಉತ್ಸವ-2025ಕ್ಕೆ ಬುಧವಾರ ತಡರಾತ್ರಿ ವರ್ಣರಂಜಿತ ವೇದಿಕೆಯಲ್ಲಿ ತೆರೆಬಿದ್ದಿತು.

ಕಮತಪುರ ಉತ್ಸವದ ಕೊನೆಯ ದಿನವಾದ ಬುಧವಾರ ಚುಟುಚುಟು ಖ್ಯಾತಿಯ ರವೀಂದ್ರ ಸೊರಗಾಂವಿ ತಂಡದಿಂದ ಮತ್ತು ಕನ್ನಡ ನಾಡಿನ ಹಿನ್ನೆಲೆ ಗಾಯಕ ರಾಜೇಶ ಕೃಷ್ಣನ್, ಡಾ. ಶಮಿತಾ ಮಲ್ನಾಡ ಅವರ ತಂಡದ ತಾರಾ ಮಂಜರಿ ಕಾರ್ಯಕ್ರಮ ನಡೆಯುವ ಮೂಲಕ ಉತ್ಸವಕ್ಕೆ ಅದ್ದೂರಿ ತೆರೆ ಬಿದ್ದಿತು.

ಸರ್ವಕಾರ್ಯಕ್ರಮದ ಸಾನ್ನಿಧ್ಯ ಮತ್ತು ನೇತತ್ವ ವಹಿಸಿದ್ದ ಕಮತಗಿ-ಕೋಟೆಕಲ್ಲ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಸ್ವಾಮೀಜಿ ಅವರು ಮಾತನಾಡಿ, ಕಳೆದ ಐದು ವರ್ಷಗಳ ಹಿಂದೆ ಕೋಟ್ಯಂತರ ರೂ. ಖರ್ಚು ಮಾಡಿ ಹೊಸ ರಥ ನಿರ್ಮಿಸಿ ಅದ್ದೂರಿಯಿಂದ ಕಾರ್ಯಕ್ರಮ ಮಾಡಿದ್ದೀರಿ, ಪಟ್ಟಾಧಿಕಾರದ ರಜತ ಮಹೋತ್ಸವವನ್ನು ಸರಳವಾಗಿ ಆಚರಿಸಿ ಎಂದು ಸೂಚಿಸಿದರೂ, ಬಹಳಷ್ಟು ವೈಭವದಿಂದ ರಜತ ಮಹೋತ್ಸವ ಕಾರ್ಯಕ್ರಮ ಮಾಡಿದ್ದೀರಿ. ನಿಮಗೆಲ್ಲ ಶ್ರೀ ಹುಚ್ಚೇಶ್ವರ ಒಳ್ಳೆಯದು ಮಾಡಲಿ ಎಂದು ಶುಭ ಹಾರೈಸಿದರು.

ರಜತ ಮಹೋತ್ಸವ ಸಮಿತಿ ಅಧ್ಯಕ್ಷ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ ಅವರು ಅಭಿನಂದನೆ ನುಡಿ ಹೇಳಿ, ರಜತ ಮಹೋತ್ಸವವನ್ನು ಕಮತಪುರ ನಾಡಿನ ಸಮಸ್ತ ಜನತೆಯ ಆಶಯ ಮತ್ತು ಹುಚ್ಚೇಶ್ವರ ಶ್ರೀಗಳ ಆಶೀರ್ವಾದಿಂದ ಅತ್ಯಂತ ವೈಭವದಿಂದ ನಡೆಯಿತು. ಈ ಅದ್ದೂರಿ ಕಾರ್ಯಕ್ರಮ ನಡೆಯಲು ಅನೇಕರ ಶ್ರಮವಿದೆ ಎಂದು ಎಲ್ಲರಿಗೂ ಕೃತಘ್ನತೆ ತಿಳಿಸಿದರು.

ಕುಂದರಗಿ ಅಮರಸಿದ್ದೇಶ್ವರ ಸ್ವಾಮೀಜಿ, ಹುನಗುಂದ ಅಮರೇಶ್ವರ ದೇವರು, ಗುಳೇದಗುಡ್ಡ ಡಾ.ಶಿವರಶರಣ ದೇವರು, ಹಿರಿಯರಾದ ಯಲ್ಲಪ್ಪ ಮಜ್ಜಗಿ, ಹನಮಂತ ಇಂಜಿನೇರಿ, ಪಪಂ ಅಧ್ಯಕ್ಷ ರಮೇಶ ಜಮಜಂಡಿ, ಹುಚ್ಚಪ್ಪ ಸಿಂಹಾಸನ, ಮಹಾಂತೇಶ ಅಂಗಡಿ, ಶ್ರೀಕಾಂತ ಹಾಸಲಕರ, ಸಂಗಣ್ಣ ಮನ್ನಿಕೇರಿ, ಯಲ್ಲಪ್ಪ ಜಗ್ಗಲ, ಗಂಗಪ್ಪ ಭೂತಲ, ಬಸವರಾಜ ಕುಂಬಳಾವತಿ, ದೇವಿಪ್ರಸಾದ ನಿಂಬಲಗುಂದಿ, ಚಂದು ಕುರಿ, ರಮೇಶ ಲಾಮಾಣಿ, ಬಿ.ವಿ.ಬೀರಕಬ್ಬಿ, ಶಂಕರ ಬಡದಾನಿ, ಎಂ.ಎಂ.ಲಾಯದಗುಂದಿ, ಮಲ್ಲಿಕಾರ್ಜುನಪ್ಪ ಲಾಯದಗುಂದಿ, ಶ್ರೇಯಾಂಶ ಕೋಲ್ಹಾರ, ಕೆ.ಎಂ.ಮಾಡಗುಂಪ್ಪನವರ, ಜಿ.ಎಲ್.ವಾಲಿಕಾರ, ಹುಚ್ಚೇಶ ಲಾಯದಗುಂದಿ, ಮಹಾಂತೇಶ ಅಂಗಡಿ, ಮುತ್ತುರಾಜ ಬೆಲ್ಲದ, ಚನ್ನಪ್ಪ ಹಳ್ಳೂರ, ಜಿ.ಎಂ. ಶೆಟ್ಟರ ಮತ್ತಿತರರಿದ್ದರು.

ಪಟ್ಟಾಧಿಕಾರದ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಮಠದ ಭಕ್ತರು ಕೂಡಿ ನನಗೆ ಬೆಳ್ಳಿ ತುಲಾಭಾರ ಮಾಡಿದ 65 ಲಕ್ಷ ರೂಗಳನ್ನು ಹೊಳೆ ಹುಚ್ಚೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ ಡಿಪಾಜಿಟ್ ಮಾಡಿ ಅದಕ್ಕೆ ಬರುವ ಬಡ್ಡಿಯ ಹಣದಲ್ಲಿ ಮುಂದಿನ ಕಮತಪುರ ಉತ್ಸವಗಳಿಗೆ ಬಳಕೆ ಮಾಡಿಕೊಳ್ಳಿ ಮತ್ತು ನನಗೆ ಈವರೆಗೆ ಭಕ್ತರಿಂದ ಬಂದ ಕಾಣಿಕೆಯಲ್ಲಿ ಕೆಲವು ಪೂಜಾ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಮಾತ್ರ ನಾನು ಬಳಕೆ ಮಾಡಿದ್ದೇನೆ. ಉಳಿದ ಹಣವನ್ನು ಭಕ್ತರಿಗೆ ಮೀಸಲಿಡಲಾಗುವುದು. ಹುಚ್ಚೇಶ್ವರ ಸ್ವಾಮೀಜಿಗಳು, ಹೊಳೆ ಹುಚ್ಚೇಶ್ವರ ಸಂಸ್ಥಾನಮಠ ಕಮತಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net