

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವತಿಯಿಂದ ನಗರದ ಚನ್ನಪೇಟ ಮತ್ತು ವಿದ್ಯುತ್ ನಗರದ 2 ಸರ್ಕಾರಿ ಶಾಲೆಗಳಿಗೆ ಬಣ್ಣ ಹಚ್ಚಿ ಇತ್ತೀಚೆಗೆ ಲೋಕಾರ್ಪಣೆ ಮಾಡಲಾಯಿತು.
ಕ್ಲಬ್ ಅಧ್ಯಕ್ಷ ಅರವಿಂದ ಕುಬಸದ ಮಾತನಾಡಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಬಣ್ಣದ ಸಂಪೂರ್ಣ ವೆಚ್ಚ ಭರಿಸಿದ್ದಾರೆ. ಕ್ಲಬ್‌ನಿಂದಲೂ ಧನಸಹಾಯ ಮಾಡಲಾಗಿದೆ. ಸರ್ಕಾರಿ ಶಾಲೆಗಳು ಬಣ್ಣದಿಂದ ನಳನಳಿಸುತ್ತಿವೆ ಎಂದರು.
ಜಿಲ್ಲಾ ಗವರ್ನರ್ ನಾಸೀರ ಬೊರ್ಸದ್ವಾಲ್ ಉದ್ಘಾಟಿಸಿದರು. ಸಹಾಯಕ ಗವರ್ನರ್ ಬಿನೊಯ ಮೊಮಾಯಾ, ಸದಸ್ಯರಾದ ಬಾಪು ಬಿರಾದಾರ, ಸುರೇಂದ್ರ ಪೋರ‌್ವಾಲ್, ರಿಶಿ ತಿವಾರಿ, ಎಂ.ಕೆ. ಪಾಟೀಲ, ಉಮೇಶ ಗಡ್ಡದ, ಅಬ್ದುಲ್ ಸಾದಿಕ್, ಜೀವನ ಮುಟಗಿ, ಮಂಜುನಾಥ ಹೊಂಬಳ ಇತರರು ಇದ್ದರು.