ಇಂದಿನಿಂದ ಸೆ.27ರವರೆಗೆ ಜಿಲ್ಲೆಯಲ್ಲಿ ಉದರ ದರ್ಶಕ ಶಸ್ತ್ರ ಶಿಬಿರ

FREE HEALTH CAMP
Published on

ಮಂಡ್ಯ: ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ಸೆ.7ರಿಂದ 27ರವರೆಗೆ ಜಿಲ್ಲಾದ್ಯಂತ ಉದರ ದರ್ಶಕ ಶಸ್ತ್ರ ಚಿಕಿತ್ಸೆ ಉಚಿತ ಶಿಬಿರ ಆಯೋಜಿಸಲಾಗಿದೆ.

7ರಂದು ಕೆರೆಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ, 8ರಂದು ಕೀಲಾರ ಸರ್ಕಾರಿ ಆರೋಗ್ಯ ಕೇಂದ್ರ, 12ರಂದು ಕೆ.ಎಂ.ದೊಡ್ಡಿ ಸರ್ಕಾರಿ ಆರೋಗ್ಯ ಕೇಂದ್ರ, 13ರಂದು ಕಿರುಗಾವಲು ಸರ್ಕಾರಿ ಆರೋಗ್ಯ ಕೇಂದ್ರ, 15ರಂದು ಬಿಂಡಿಗನವಿಲೆ ಸರ್ಕಾರಿ ಆರೋಗ್ಯ ಕೇಂದ್ರ ಹಾಗೂ ಮಧ್ಯಾಹ್ನ 1 ಗಂಟೆಗೆ ನಾಗಮಂಗಲ ಸರ್ಕಾರಿ ಆಸ್ಪತ್ರೆ, 16ರಂದು ಪಾಂಡವಪುರ ಉಪವಿಭಾಗ ಆಸ್ಪತ್ರೆ, 20ರಂದು ಅರಕೆರೆ ಸರ್ಕಾರಿ ಆರೋಗ್ಯ ಕೇಂದ್ರ, 22ರಂದು ಪಾಂಡವಪುರ ಉಪವಿಭಾಗ ಆಸ್ಪತ್ರೆ, 26ರಂದು ಶಿವಳ್ಳಿ ಸರ್ಕಾರಿ ಆರೋಗ್ಯ ಕೇಂದ್ರ ಮತ್ತು 27ರಂದು ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net