

ಗೋಕಾಕ: ಕರ್ನಲ್ ಸೋಫಿಯಾ ಖುರೇಷಿ ಅವರು ಗೋಕಾಕ ೇತ್ರದ ಸೊಸೆ ಎಂಬುವುದೇ ದೊಡ್ಡ ಹೆಮ್ಮೆ. ಅವರು ಕೇವಲ ಸೊಸೆ ಮಾತ್ರವಲ್ಲ, ಈ ಭಾಗದ ಮಗಳು ಹೌದು. ಅವರ ಸಾಧನೆಯನ್ನು ಇಡೀ ದೇಶವೇ ಹೆಮ್ಮೆಪಡುವಂತಾಗಿದೆ. ಗೋಕಾಕ ಹೆಸರನ್ನು ಇಡೀ ದೇಶಕ್ಕೆ ವಿಸ್ತರಿಸುವ ಮೂಲಕ ಅವರು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಶ್ಲಾಘಿಸಿದರು.
ನಗರದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರ ಮಾವ ಗೌಸಸಾಬ್ ಬಾಗೇವಾಡಿ ಅವರನ್ನು ಶನಿವಾರ ಸನ್ಮಾನಿಸಿ ಮಾತನಾಡಿದ ಅವರು, ಈ ಭಾಗದ ಸೊಸೆ ಸೋಫಿಯಾ ಖುರೇಷಿ ಅವರು ಆಪರೇಷನ್ ಸಿಂಧೂರ್ ನಡೆಸಿ ಇಡೀ ಪ್ರಪಂಚವೇ ಇತ್ತ ನೋಡುವಂತೆ ಮಾಡಿದ್ದಾರೆ. ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ಅವರು ಸೇರಿದಂತೆ ದೇಶದ ಯೋಧರಿಗೆ ಮತ್ತಷ್ಟು ಶಕ್ತಿ ನೀಡಲೆಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ. ನಮ್ಮ ಭಾರತದ ಎಲ್ಲ ಯೋಧರಿಗೆ ಶಕ್ತಿ ತುಂಬೋಣ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಎಪಿಎಂಸಿ ಮಾಜಿ ಅಧ್ಯ ಅಜ್ಜಪ್ಪ ಗಿರಡ್ಡಿ, ವಕೀಲ ಎ.ಎಸ್.ಪರಪ್ಪನವರ, ದೂರವಾಣಿ ಸಲಹಾ ಸಮಿತಿ ಸದಸ್ಯ ಪ್ರಧಾನಿ ಕಳಸನ್ನವರ, ಮಹಾದೇವ ತಾಂಬಡಿ, ರಮೇಶ ಬಿಲಕುಂದಿ, ಜಂಬೂ ಚಿಕ್ಕೋಡಿ, ಶಾಸಕರ ಆಪ್ತ ಸಹಾಯಕ ಲಕ್ಕಪ್ಪ ಲೋಕುರಿ ಇತರರು ಇದ್ದರು.