ನಿಂತಿದ್ದ ಲಾರಿಗೆ ಡಿಕ್ಕಿ; ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

virupakshappa and rajesh
ಮೃತರಾದ ವಿರೂಪಾಕ್ಷಪ್ಪ ಮತ್ತು ರಾಜೇಶ್.
Published on

ಶಿವಮೊಗ್ಗ: ತಾಲೂಕಿನ ಕುಂಚೇನಹಳ್ಳಿ ಸಮೀಪ ಕಲ್ಲಾಪುರದಲ್ಲಿ ಗುರುವಾರ ರಾತ್ರಿ ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನ್ಯಾಮತಿ ತಾಲೂಕಿನ ಬೆಳಗುತ್ತಿಯ ವಿರೂಪಾಕ್ಷಪ್ಪ (55) ಮತ್ತು ರಾಜೇಶ್ (37) ಮೃತರು. ರಾಜೇಶ್ ಬೆಳಗುತ್ತಿಯಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದು ಪರಿಯಸ್ಥರಾದ ವಿರೂಪಾಕ್ಷಪ್ಪ ಅವರ ಜತೆ ಮೊಬೈಲ್ ಖರೀದಿಗೆ ಶಿವಮೊಗ್ಗಕ್ಕೆ ಬಂದಿದ್ದರು. ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಊರಿಗೆ ಹೊರಟಿದ್ದರು.
ತಡರಾತ್ರಿ 12 ಗಂಟೆ ಸುಮಾರಿಗೆ ಯಾವುದೇ ಸಿಗ್ನಲ್ ಇಲ್ಲದೆ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು ಗಂಭೀರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಚಾಲಕ ಹುಬ್ಬಳ್ಳಿ ತಾಲೂಕು ಜಾವೂರಿನ ಸಿದ್ಧಾರೂಢ ಎಂಬಾತನ ಮೇಲೆ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net