ಗುರು ಸ್ಥಾನ ಸರ್ವಾಂಗೀಣ ವಿಕಾಸದ ಕೇಂದ್ರ ಬಿಂದು; ಪ್ರೊ. ಶಿವಾನಂದ ಮೇಟಿ

TEACHERES
ಗಂಗಾವತಿ ಟಿಎಂಎಇ ಬಿಇಡಿ ಕಾಲೇಜಿನ ಸಭಾಂಗಣದಲ್ಲಿ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದಿಂದ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮವನ್ನು ಪದವಿ ಕಾಲೇಜಿನ ಉಪನ್ಯಾಸಕ ಪ್ರೊ.ಶಿವಾನಂದ ಮೇಟಿ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಕೆ.ಸಿ.ಕುಲ್ಕರ್ಣಿ, ರಾಜ್ಯ ಸಮಿತಿ ಸದಸ್ಯ ಡಾ.ಬಸವರಾಜ ಪೂಜಾರ್ ಇತರರಿದ್ದರು.
Published on

ಗಂಗಾವತಿ: ಜ್ಞಾನ ಪರಂಪರೆಯ ತಾಣದಲ್ಲಿ ಗುರುವಿಗೆ ಪ್ರಾಚೀನ ಕಾಲದಿಂದಲೂ ಪೂಜ್ಯನೀಯ ಸ್ಥಾನವಿದ್ದು, ಯಾವುದೇ ಬದಲಾವಣೆ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಪದವಿ ಕಾಲೇಜಿನ ಉಪನ್ಯಾಸಕ ಪ್ರೊ.ಶಿವಾನಂದ ಮೇಟಿ ಹೇಳಿದರು.

ನಗರದ ಟಿಎಂಎಇ ಬಿಇಡಿ ಕಾಲೇಜಿನ ಸಭಾಂಗಣದಲ್ಲಿ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದಿಂದ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ರಾಷ್ಟ್ರದ ಶಿಲ್ಪಿಗಳಾಗಿದ್ದು, ಭವಿಷ್ಯ ರೂಪಿಸುವ ಶಕ್ತಿ. ಗುರು ಸ್ಥಾನ ಸರ್ವಾಂಗೀಣ ವಿಕಾಸದ ಕೇಂದ್ರಬಿಂದು ಆಗಿದ್ದು, ವ್ಯಕ್ತಿತ್ವ ನಿರ್ಮಾಣದ ಹರಿಕಾರ ಎಂದರು. ಪ್ರಾಚಾರ್ಯ ಡಾ.ಕೆ.ಸಿ.ಕುಲ್ಕರ್ಣಿ ಮಾತನಾಡಿ, ಪ್ರತಿ ವ್ಯಕ್ತಿಯ ಮೇಲೆ ಗುರುವಿನ ಪ್ರಭಾವವಿದ್ದು, ಗುರುವನ್ನು ಸ್ಮರಿಸುವುದು ಪುಣ್ಯದ ಕಾರ್ಯ ಎಂದರು.

ರಾಜ್ಯ ಸಮಿತಿ ಸದಸ್ಯರಾದ ಡಾ.ಬಸವರಾಜ ಪೂಜಾರ್, ಡಾ. ಎನ್.ಜಿ.ಹೆಬ್ಸೂರ್, ಬಸವರಾಜ, ಪ್ರೊ. ಸುಂಕೇಶ್ವರ ಕರಿಗೂಳಿ, ವಿಭಾಗೀಯ ಅಧ್ಯಕ್ಷ ಪ್ರೊ.ಶರಣಬಸಪ್ಪ ಬಿಳೆಯಲಿ, ಜಿಲ್ಲಾ ಸಮಿತಿ ಸದಸ್ಯರಾದ ಪವನಕುಮಾರ ಗುಂಡೂರು, ಎ.ಕೆ.ಮಹೇಶಕುಮಾರ, ಜಯರಾಂ ಮರಡಿತೋಟ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net