ಹೈಕೋರ್ಟ್ ಕಲಾಪಗಳ ಮಾಹಿತಿ ಪಡೆದ ವಿದ್ಯಾರ್ಥಿಗಳು

web 2
Published on

ಧಾರವಾಡ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಇಲ್ಲಿನ ಹೈಕೋರ್ಟ್ ಪೀಠಕ್ಕೆ ಶನಿವಾರ ಭೇಟಿ ನೀಡಿ ನ್ಯಾಯಾಲಯದ ಕಾರ್ಯಚಟುವಟಿಕೆ, ಕಲಾಪದ ಮಾಹಿತಿ ಪಡೆದರು.
ರಾಜ್ಯಶಾಸ ಹಾಗೂ ಸಮಾಜಶಾಸದ 42 ವಿದ್ಯಾರ್ಥಿ ಹೈಕೋರ್ಟ್‌ನ 8 ಹಾಲ್‌ಗಳಲ್ಲಿ ಸಿವಿಲ್, ಕ್ರಿಮಿನಲ್, ಕೌಟುಂಬಿಕ ಪ್ರಕರಣಗಳ ವಿಚಾರಣೆಯನ್ನು ವೀಕ್ಷಿಸಿದರು. ನಂತರ ಗ್ರಂಥಾಲಯಕ್ಕೆ ಭೇಟಿ ನೀಡಿದರು.
ಕಾಲೇಜಿನ ರಾಜ್ಯಶಾಸ ವಿಭಾಗದ ಮುಖ್ಯಸ್ಥೆ ಡಾ. ಬಸವರಾಜೇಶ್ವರಿ ಆರ್. ಪಾಟೀಲ, ಗ್ರಂಥಪಾಲಕಿ ಲತಾ ಆರ್. ಪಾಟೀಲ, ದೈಹಿಕ ಶಿಕ್ಷಣ ಶಿಕ್ಷಕ ಶಿವಾನಂದ ನರಹಟ್ಟಿ, ಸಹ ಪ್ರಾಧ್ಯಾಪಕರ ಎಸ್.ಸಿ. ಪಟ್ಟಣಶೆಟ್ಟಿ, ಉಪನ್ಯಾಸಕರಾದ ಡಾ. ಎನ್.ಜಿ. ಬಂಡಿ ಮಾರ್ಗದರ್ಶನ ಮಾಡಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net