

ಕಾಸರಗೋಡು: ಪುತ್ತಿಗೆ ಪಂಚಾಯಿತಿ ಮುಗು ರಸ್ತೆ ನಿವಾಸಿ ಮುಹಮ್ಮದ್-ಪೌಸಿಯ ದಂಪತಿಯ ಪುತ್ರಿ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಪ್ರಥಮ ವರ್ಷದ ಪದವಿ ತರಗತಿ ವಿದ್ಯಾರ್ಥಿನಿ ಆಯಿಷತ್ ತ್ವಯಿಬಾ(18) ಅನಾರೋಗ್ಯದಿಂದ ಮೃತಪಟ್ಟರು. ಕಾಲೇಜಿನ ಪ್ರಥಮ ವರ್ಷ ಬಿಟಿಟಿಎಂ ವಿದ್ಯಾರ್ಥಿನಿಯಾಗಿದ್ದರು. ಹಲವು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟರು.