ಕಾಲೇಜು ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

sucide
Published on

ಮಂಗಳೂರು: ನಗರದ ಕೊಡಿಯಾಲಬೈಲ್‌ನ ಪಿಜಿಯೊಂದರಲ್ಲಿ ವಾಸವಿದ್ದ ಕೇರಳ ಕೊಟ್ಟಾಯಂ ನಿವಾಸಿ ಹನ್ೀ (19) ಎಂಬಾತ ಗುರುವಾರ ರಾತ್ರಿ ಕೈಗೆ ಬ್ಲೇಡ್‌ನಿಂದ ಗೀರಿಕೊಂಡು ಬಳಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈತ ನಗರದ ಕಾಲೇಜೊಂದರಲ್ಲಿ ಎಂಎಸ್ಸಿ ಓದುತ್ತಿದ್ದು, ಕೊಡಿಯಾಲ್‌ಬೈಲ್‌ನ ಪಿಜಿಯಲ್ಲಿ ವಾಸಿಸುತ್ತಿದ್ದ. ಈತನ ಜತೆ ಬೇರೆ ವಿದ್ಯಾರ್ಥಿಗಳು ಕೂಡಾ ಇದ್ದು ಕೆಲ ದಿನಗಳ ಹಿಂದೆ ರಜೆಯಲ್ಲಿ ಊರಿಗೆ ಹೋಗಿದ್ದರು. ಗುರುವಾರ ರಾತ್ರಿ ಪಿಜಿಗೆ ಬಂದಿದ್ದ ಈತ ರೂಮಿನ ಬಾಗಿಲು ಹಾಕಿ ಬ್ಲೇಡಿನಿಂದ ಕೈಗೆ ಗೀರಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಇದರಿಂದ ಸಮಾಧಾನಗೊಳ್ಳದೆ ನೈಲಾನ್ ಹಗ್ಗವನ್ನು ಕಿಟಕಿಗೆ ಕಟ್ಟಿ ಕುತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹನ್ೀ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಹಲವು ಸಮಯದಿಂದ ಮಾನಸಿಕವಾಗಿ ಒತ್ತಡಕ್ಕೊಳಗಾಗಿ ಈ ಹಿಂದೆಯೂ ಹಲವು ಬಾರಿ ಕೈಗೆ ಗೀರಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಈ ಗಾಯಗಳು ದೇಹದಲ್ಲಿ ಕಂಡು ಬಂದಿವೆ.

ಹನ್ೀ ಅವರ ತಂದೆಗೆ ಒಟ್ಟು ಮೂವರು ಮಕ್ಕಳಾಗಿದ್ದು, ಹನ್ೀ ಹಾಗೂ ಇನ್ನೊಬ್ಬ ಅವಳಿ-ಜವಳಿ. ಇನ್ನೊಬ್ಬ ಕೊಟ್ಟಾಯಂನಲ್ಲಿ ಉದ್ಯೋಗದಲ್ಲಿದ್ದಾನೆ. ಈತನ ಅಣ್ಣ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾನೆ. ಹನ್ೀ ಅವರ ಕುಟುಂಬಿಕರು ಶುಕ್ರವಾರ ಬೆಳಗ್ಗೆ ಮಂಗಳೂರಿಗೆ ಬಂದಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಬಳಿಕ ಅಂಬುಲೆನ್ಸ್‌ನಲ್ಲಿ ಮೃತದೇಹ ಕೊಟ್ಟಾಯಂಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net