ಸಾಂಘಿಕ ಪ್ರಯತ್ನದಿಂದಲೇ ಕಾಲೇಜು ಉನ್ನತ ಮಟ್ಟಕ್ಕೆ

2 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಉಪನ್ಯಾಸಕರು, ಪ್ರಾಚಾರ್ಯರ ಹಾಗೂ ಆಡಳಿತ ಮಂಡಳಿಯ ಸಾಂಘಿಕ ಪ್ರಯತ್ನದಿಂದ ಕಾಲೇಜು ಉನ್ನತ ಮಟ್ಟಕ್ಕೆ ಏರುತ್ತಿದೆ. ಭಾಗೀರಥಿಬಾಯಿ ಅವರ ಆಶಯದಂತೆ ಸಂಸ್ಥೆಯನ್ನು ಮುನ್ನಡೆಸಲಾಗುತ್ತಿದ್ದು, ಹೆಣ್ಣುಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಗುಣ ಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ವನಿತಾ ಸೇವಾ ಸಮಾಜದ ನಿದೇರ್ಶಕ ದಾನಪ್ಪ ಕಬ್ಬೇರ ಹೇಳೀದರು.

ನಗರದ ವನಿತಾ ಸೇವಾ ಸಮಾಜದ ವನಿತಾ ಮಹಿಳಾ ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ದ್ವೀತಿಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಪಾಲಕರೂ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಿ ಅವಶ್ಯಕತೆಗಳನ್ನು ಒದಗಿಸಬೇಕು. ದ್ವೀತಿಯ ಪಿಯುಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಕಾಲೇಜಿಗೆ ಹಾಗೂ ಪಾಲಕರಿಗೂ ಕೀರ್ತಿ ತರಬೇಕು ಎಂದರು.

ಶ್ರೀಕಾಂತ ಗುರುವ ಮಾತನಾಡಿ, ಹೆಣ್ಣುಮಕ್ಕಳಿಗೆ, ಬಡವರಿಗೆ ವಿದ್ಯಾಭ್ಯಾಸ ಕೊಡುವುದು ದೇವರ ಕೆಲಸ. ಹೆತ್ತ ತಾಯಿ, ಹೊತ್ತ ನಾಡಿಗೆ ಪ್ರಾಮುಖ್ಯತೆ ಕೊಡಬೇಕು. ತಾಯಿ ಋಣವನ್ನು 7 ಜನ್ಮಕ್ಕೂ ತೀರಿಸಲಾಗದು. ಗುರು ಶಿಷ್ಯರ ಸಂಬಂಧ ಅದ್ಭುತ ಮತ್ತು ಪವಿತ್ರವಾದದ್ದು. ಸಾಧನೆಯ ಹಾದಿಯಲ್ಲಿ ನಡೆದರೆ ಕಾಲೇಜಿಗೆ ಮತ್ತು ದೇಶಕ್ಕೆ ಕೀರ್ತಿ ತರಬಹುದು ಎಂದರು.

ಬಸವರಾಜ ವಾಸನದ, ಎಸ್​.ವಿ. ತಟವಟಿ ಮಾತನಾಡಿದರು. ವನಿತಾ ಮಹಾವಿದ್ಯಾಲಯದ ಪ್ರಾಚಾರ್ಯ ಆರ್​.ಬಿ. ದೊಡಮನಿ ಅಧ್ಯಕ್ಷತೆ ವಹಿಸಿದ್ದರು.

ರಾಧಿಕಾ ಕುಲಕರ್ಣಿ, ಮಧುರಾ ಹೆಗಡೆ, ಅಶೋಕ ನಾಯಕ, ರಾಜೇಶ್ವರಿ ಅಳಗವಾಡಿ, ಇತರರು ಇದ್ದರು. ಕವಿತಾ ಹಂಚಿನಮನಿ ಮತ್ತು ಪೂಜಾ ಪವಾರ ನಿರೂಪಿಸಿದರು. ಸಂತೋಷ ಕಲಕೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net