ರಾಜಕೀಯ ಸಮಾವೇಶಗಳಿಗೆ ಕಾಲೇಜು ಮೈದಾನ ಬೇಡ

CTD 10 ABVP-03
Published on

ಚಿತ್ರದುರ್ಗ: ಸರ್ಕಾರಿ ವಿಜ್ಞಾನ ಕಾಲೇಜು(ಮುರುಘಾ ರಾಜೇಂದ್ರ)ಮೈದಾನದಲ್ಲಿ ರಾಜಕೀಯ ಸಮಾವೇಶಗಳಿಗೆ ಅವಕಾಶ ನೀಡಬಾರದೆಂದು ಒ ತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.

ಭಾನುವಾರ ನಡೆದ ಕಾಂಗ್ರೆಸ್ ಸಮಾವೇಶ ಸಂದರ್ಭದಲ್ಲಿ ಉಂಟಾದ ತ್ಯಾಜ್ಯ ವಸ್ತುಗಳನ್ನು ಕ್ಯಾಂಪಸ್ ಆವರಣದಲ್ಲೇ ಬಿಡಲಾಗಿದೆ ಹಾಗೂ ಸಮಾವೇಶದಿಂದಾಗಿ ಕಳೆದೊಂದು ಒಂದು ವಾರದಿಂದ ಶೈಕ್ಷಣಿಕ ವಾತಾವರಣ ದುಸ್ಥಿತಿಗೆ ತಲುಪಿತ್ತು.

ಸ್ವಚ್ಛತೆಗೆ ಸೂಕ್ತ ಕ್ರಮ ಜ ರುಗಿಸ ಬೇಕು ಹಾಗೂ ರಾಜಕೀಯ ಸಮಾವೇಶಗಳಿಗೆ ಕಾಲೇಜು ಆವರಣ ನೀಡಬಾರದೆಂದು ಒತ್ತಾಯಿಸಿ ಎಡಿಸಿ ಇ.ಬಾಲಕೃಷ್ಣ ಅವರಿ ಗೆ ಮನವಿ ಸಲ್ಲಿಸಿದರು. ಪರಿಷತ್ ವಿಭಾಗ ಸಂಚಾಲಕ ಅದರ್ಶ,ಗೋಪಿ,ದರ್ಶನ್,ಹರೀಶ್,ಮಧು,ಶ್ರೀನಿವಾಸ್,ಅಭಿಲಾಶ್,ಭರತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net