ಜ್ಞಾನದ ಸಂಜೀವಿನಿ ನೀಡುವ ಶಕ್ತಿಯೇ ಗುರು: ಮರುಳಾರಾಧ್ಯ ಶ್ರೀಗಳ ಅಭಿಮತ

GURUVANDANA
ಅಳವಂಡಿ ಎಸ್‌ಎಸ್‌ಪಿಯು ಕಾಲೇಜಿನ 1994-95ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಗುರುಗಳನ್ನು ಹೂಮಳೆ ಸುರುಸುವ ಮೂಲಕ ಸ್ವಾಗತಿಸಲಾಯಿತು.
Published on

ಅಳವಂಡಿ: ಗುರು ಎಂದರೆ ಬೆಳಕು, ಜ್ಞಾನ, ತೇಜಸ್ಸು. ಹೀಗಾಗಿ ಗುರುಗಳನ್ನು ಜ್ಞಾನಸೂರ್ಯ ಎನ್ನುತ್ತಾರೆ. ಸೂರ್ಯ ಬಂದ ಕೂಡಲೇ ಕತ್ತಲೆ ಸಹಜವಾಗಿ ಕರಗುವಂತೆ ಗುರುವಿನ ಜ್ಞಾನದ ಅನುಗ್ರಹ ಆದ ಕೂಡಲೆ ಅಜ್ಞಾನ ತಾನಾಗಿಯೇ ನಿವಾರಣೆಯಾಗಿ ಸುಜ್ಞಾನ ಫಲಿಸುತ್ತದೆ. ಗುರುಗಳು ಜ್ಞಾನದ ಸಂಜೀವಿನಿ ನೀಡುವ ಶಕ್ತಿ ಎಂದು ಶ್ರೀಸಿದ್ದೇಶ್ವರ ಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ತಿಳಿಸಿದರು.

ಗ್ರಾಮದ ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ 1994-95ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಲ್ಲರನ್ನೂ ಸಮ ದೃಷ್ಟಿಯಿಂದ ನೋಡುತ್ತ ಜ್ಞಾನದ ಧಾರೆ ಹರಿಸುವ ಗುರುಗಳನ್ನು ಗೌರವಿಸುವುದು ನಿಜಕ್ಕೂ ಸತ್ಕಾರ್ಯವೇ ಸರಿ. ಅವರನ್ನು ಆಧರಿಸುವ ಭವ್ಯ ಪರಂಪರೆ ನಮ್ಮದು. ಇದು ಗುರು-ಶಿಷ್ಯರ ಅಪೂರ್ವ ಸಂಗಮ. ಇಲ್ಲಿ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಭವ್ಯ ಕಾರ್ಯಕ್ರಮ ಇದಾಗಿದೆ ಎಂದು ಬಣ್ಣಿಸಿದರು.

ಇದಕ್ಕೂ ಮೊದಲು ಗುರುಗಳನ್ನು ಪುಷ್ಪ ಸಮರ್ಪಣೆ ಮೂಲಕ ಸ್ವಾಗತಿಸಿದರು. ನಂತರ ಗುರುಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಪ್ರಮುಖರಾದ ಭುಜಂಗಸ್ವಾಮಿ ಇನಾಮ್ದಾರ, ಪ್ರಕಾಶ ತಗಡಿನಮನಿ, ಚಂದ್ರಶೇಖರ ದೊಡ್ಡಮನಿ, ಪುಲೇಶಿ, ಲಕ್ಕನಗೌಡರ, ಎಂ.ಎಸ್.ಹೊಟ್ಟಿನ, ಬಿ.ಎಸ್.ತೊಂಡಿಹಾಳ, ಎಂ.ಎಲ್.ಪೊಲೀಸ ಪಾಟೀಲ, ಪಿ.ವಿ.ಹಿರೇಮಠ, ಜಿ.ಜಿ.ಕುರಡಗಿ, ಎಚ್.ಎಸ್.ಎಲ್ಲಪ್ಪಗೌಡರ, ಪಿ.ಎಚ್.ಹಿರೇಮಠ, ಎಚ್.ಎಸ್.ಕಲ್ಗುಡಿ, ವಿ.ಎಚ್.ಕಲಾದಗಿ, ಹಿರೇಮನಿ, ವರಲಕ್ಷ್ಮೀ, ಅನ್ನಪೂರ್ಣಾ, ಶಂಕ್ರಮ್ಮ, ಮಾಯಾದೇವಿ, ಸುರೇಶ, ಮಹೇಶ, ಶರಣಪ್ಪ, ನಾಗಪ್ಪ ಮಾಸ್ತರ, ವಿಷ್ಣು, ವೀರಣ್ಣ, ಜಾನಮ್ಮ, ವಿಠ್ಠಲ, ಲೀಲಾವತಿ ಇದ್ದರು.

ವಿದ್ಯಾರ್ಥಿಗಳಿಗೆ ಜ್ಞಾನವೆಂಬ ಅಮೃತ ನೀಡಿ, ಸುಜ್ಞಾನಿಗಳನ್ನಾಗಿಸುವ ಗುರುಗಳನ್ನು ಗೌರವಿಸಿವುದು ಹೆಮ್ಮೆಯ ವಿಚಾರ. ಜೀವನದಲ್ಲಿ ಸಾಧನೆ ಮಾಡಲು, ಸಂಸ್ಕಾರ ಬೆಳೆಸಲು ಗುರುವಿನ ಶ್ರಮ ಇದೆ. ಗುರು ಇಲ್ಲದೆ ಗುರಿ ತಲುಪುವುದು ಅಸಾಧ್ಯ.ಎ.ಟಿ.ಕಲ್ಮಠ, ನಿವೃತ್ತ ಪ್ರಾಚಾರ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net