ವಿಜಯವಾಣಿ ಸುದ್ದಿಜಾಲ ಗದಗ
ಯಶಸ್ಸನ್ನು ಸಾಧಿಸಬೇಕೆಂದರೆ ದೃಢವಾದ ಮನಸ್ಸು ಇರಬೇಕು. ಸಾಧನೆಯ ಹಾದಿಯಲ್ಲಿ ಮುನ್ನೆಡೆದು ಪ್ರಗತಿಗಾಗಿ ಶ್ರಮಿಸಿದರೆ ಯಾವ ಆತಂಕಗಳು ಬಂದರೂ, ಯಾವುದೇ ಶಾರೀರಿಕ, ಭೌದ್ಧಿಕ, ಮಾನಸಿಕ ನ್ಯೂನ್ಯತೆಗಳಿದ್ದರೂ ಯಶಸ್ಸನ್ನು ಸಾಧಿಸಬಹುದು ಎಂದು ಪ್ರೊ. ವೀಣಾ ತಿರ್ಲಾಪೂರ ಹೇಳಿದರು.
ನಗರದ ಶಿವಾನಂದ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಜರುಗಿದ ವಾಷಿರ್ಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಕಲಾಂಗ ಇದ್ದವರೂ ಮೌಂಟ ಎವರೆಸ್ಟ್ ಏರಿ ಸಾಧನೆ ಮಾಡಿದ್ದಾರೆ. ಛಲ ಒಂದಿದ್ದರೆ ಏನೆಲ್ಲ ಸಾಧಿಸಿಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಭವಿಷ್ಯದಲ್ಲಿ ಯಶಸ್ಸು ಸಾಧಿಸಲು ಹಠ, ಛಲ ಇರಬೇಕು ಎಂದರು.
ಪ್ರಾಚಾರ್ಯ ಎಸ್. ವಿ. ವೆರ್ಣೇಕರ ಮಾತನಾಡಿ, ಪರೀೆ ಸಮೀಪಿಸುತ್ತಿರುವುದರಿಂದ ಸಮಯವನ್ನು ವ್ಯರ್ಥ ಮಾಡದೇ ಜ್ಞಾನಾರ್ಜನೆಯಲ್ಲಿ ತೊಡಗಿ ನಮ್ಮ ಕಾಲೇಜಿನ ಉತ್ತಮ ಲಿತಾಂಶ ತರಲು ವಿದ್ಯಾಥಿರ್ಗಳು ಶ್ರಮವಹಿಸಬೇಕು ಎಂದರು.
ಡಾ. ಜಿ.ಬಿ.ಪಾಟೀಲ, ಚೇತನಾ ಬೊಮ್ಮಪ್ಪನವರ, ಎಸ್. ಬಿ. ಹಿರೇಮಠ ಎಂ. ಪಿ. ಮಂಟೂರ, ಕೃಷ್ಣಪ್ರಸಾದ, ಮಂಜುನಾಥ ಬಾಕಿರ್, ಪ್ರಿಯಾಂಕಾ ಪಾಟೀಲ ಇತರರು ಇದ್ದರು.