

ರಬಕವಿ-ಬನಹಟ್ಟಿ: ರಬಕವಿ ಬನಹಟ್ಟಿ ಅವಳಿ ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ಬನಹಟ್ಟಿಯ ಜನತಾ ಶಿಕ್ಷಣ ಸಂಸ್ಥೆಯ ಎಸ್‌ಆರ್‌ಎ ಹೈಸ್ಕೂಲ್ ಮೈದಾನದ ತಡೆಗೋಡೆ ಕುಸಿದಿದೆ.
ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಗಾಳಿ ಸಹಿತ ಮಳೆಗೆ ವಿವಿಧೆಡೆಯ ರಸ್ತೆಗಳು ಕೊಚ್ಚಿಹೋಗಿವೆ. ಎಸ್‌ಆರ್‌ಎ ಹೈಸ್ಕೂಲ್ ತಡೆಗೋಡೆ ತುಂಬ ಹಳೆಯದಾಗಿತ್ತು. ಮೈದಾನದಲ್ಲಿನ ಅಪಾರ ನೀರು ಹರಿದು ಬಂದಿದ್ದರಿಂದಾಗಿ ಗೋಡೆ ಕುಸಿದಿದೆ. ರಾಜ್ಯ ಹೆದ್ದಾರಿ ಪಕ್ಕದಲ್ಲೇ ಈ ಗೋಡೆ ಇರುವುದರಿಂದ ಸಾರ್ವಜನಿಕರಿಗಾಗಲಿ, ರಸ್ತೆ ಸಂಚಾರಿಗಳಿಗಾಗಲಿ ಯಾವುದೇ ಹಾನಿಯಾಗಿಲ್ಲ. ನಗರಗಳಲ್ಲಿನ ತಗ್ಗು ಗುಂಡಿಗಳಲ್ಲಿ ಅಪಾರ ನೀರು ಸಂಗ್ರಹವಾಗಿತ್ತು. ಇದರಿಂದಾಗಿ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ನಿಮಿತ್ತ ಅಲ್ಲಲ್ಲಿ ಮಹಿಳೆಯರು ಪೂಜೆಗೆ ತೆರಳಲು ತೊಂದರೆಯಾಯಿತು.