

ಕುಶಾಲನಗರ:
ಕುಶಾಲನಗರ ತಾಲೂಕು ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಕಾಲೇಜಿನ ಉಪನ್ಯಾಸಕ ವೃಂದದವರಿಗೆ ಶನಿವಾರ ಗುರು ಅಭಿವಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕಾಲೇಜು ಪ್ರಾಂಶುಪಾಲ ಹಂಡ್ರAಗಿ ನಾಗರಾಜ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ಭವಿಷ್ಯದ ಕನಸು ನನಸಾಗಿಸಿಕೊಳ್ಳಲು ದಿಟ್ಟತನ, ಛಲ ಅಗತ್ಯವಾಗಿರುತ್ತದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು ಓದಿನ ಕಡೆಗೆ ಹೆಚ್ಚು ಒತ್ತು ನೀಡಿ ಹೆಚ್ಚು ಅಂಕಗಳನ್ನು ಗಳಿಸಿ ಕಾಲೇಜಿಗೆ, ತಮ್ಮ ಪೋಷಕರಿಗೆ ಗೌರವ ತರುವಂತಾಗಬೇಕು. ಕಾಲೇಜು ಹಂತದಿAದಲೇ ಉತ್ತಮ ವ್ಯಕ್ತಿತ್ವ, ಉದ್ದೇಶ, ಗುರಿಗಳನ್ನು ರೂಢಿಸಿಕೊಂಡು ನಡೆದರೆ ಮುಂದಿನ ದಿನಗಳಲ್ಲಿ ಯಶಸ್ಸು ಕಾಣಲು ಸಾಧ್ಯ. ಗುರುಗಳು ಬಯಸುವುದು ವಿದ್ಯಾರ್ಥಿಗಳ ಫಲಿತಾಂಶ. ಅದರ ಜತೆಯಲ್ಲಿ ಕಾಲೇಜಿನ ಶಿಸ್ತು ವಿದ್ಯಾರ್ಥಿಗಳು ಅನುಸರಿಸಿಬೇಕು. ವಿಧ್ಯಾಭ್ಯಾಸದ ಪ್ರಗತಿ, ಕಾಲೇಜು ಅಭಿವೃದ್ಧಿಗೆ ಎಲ್ಲಾ ವಿದ್ಯಾರ್ಥಿಗಳ, ಪೋಷಕರು ಸಹಕಾರ ಮುಖ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಮಾಜಿ ಉಪಾಧ್ಯಕ್ಷ ಕೆ.ಕೆ. ನಾಗರಾಜ ಶೆಟ್ಟಿ ಮಾತಾನಾಡಿ ಪ್ರಜಾಪ್ರಭುತ್ವದ ಮೌಲ್ಯ, ಸಿದ್ದಾಂತ ವಿದ್ಯಾರ್ಥಿಗಳ ಜೀವನದ ಆದರ್ಶಗಳನ್ನು ಒಳಗೊಳ್ಳುವ ಹಾಗೂ ಅನುಸರಿಸಿಕೊಳ್ಳುವ ಜನಾಂಗವನ್ನು ತಯಾರಿಸುವ ಗುರಿ ಗುರುಗಳದಾಗಿರುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಬದುಕನ್ನು ಸಾಧಿಸಲು ಶಿಕ್ಷಣ ನೀಡಿದ ಗುರುಗಳು ಶಿಷ್ಯರಿಗೆ ವಿದ್ಯೆ ಬುದ್ಧಿ ನೀಡಿ ಸನ್ಮಾರ್ಗದತ್ತ ಕೊಂಡೊಯ್ಯವ ಗುರುವೃಂದವನ್ನು ಸ್ಮರಿಸುವುದು ಪುಣ್ಯದ ಕಾರ್ಯ. ಗುರು ನೀಡಿದ ವಿದ್ಯೆ ತನ್ನ ಕೊನೆಯ ಉಸಿರಿರುವ ಇರುತ್ತದೆ. ಅಂತಹ ಗುರುಗಳನ್ನು ನೆನೆಯುವುದು ಬಹು ಮುಖ್ಯ ಎಂದು ಹೇಳಿದರು.
ಗುರು ವಂದನಾ ಕಾರ್ಯಕ್ರಮದಲ್ಲಿ ಗುರುಗಳಿಗೆ ನಡೆದ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಇದೇ ವೇಳೆ ಬಹುಮಾನ ವಿತರಿಸಲಾಯಿತು.
ಉಪನ್ಯಾಸಕರಾದ ನಾಗಪ್ಪ ಏಲಕ್ಕಿಕಟ್ಟೆ, ರಮೇಶ್, ಹನುಮರಾಜ್, ಸೂಸಿ, ಲಿನೆಟ್, ಗೌತಮಿ, ಪ್ರೇಕ್ಷತ್, ನಂದಿನಿ, ಅನುಷಾ ಲತಾ, ಕವಿತಾ, ಸಿಬ್ಬಂದಿ ವರ್ಗ, ಹಾಗೂ ವಿದ್ಯಾರ್ಥಿಗಳು ಇದ್ದರು.