

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಮಹಿಳಾ ಶಿಣ ಮಹಾವಿದ್ಯಾಲಯದ ಸರ್ಕಾರಿ ಉರ್ದು ಹಾಗೂ ಕನ್ನಡ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ವಿದ್ಯಾಥಿರ್ಗಳಿಗೆ 8ನೇ ತರಗತಿ ಇಂಗ್ಲಿಷ್ ಭಾಷಾ ವಿಷಯವನ್ನು ಪಾಠ ಬೋಧಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ವಿಶಿಷ್ಟವಾಗಿ ಶುಕ್ರವಾರ ಚಾಲನೆ ನೀಡಿದರು.
ಇದಕ್ಕೂ ಪೂರ್ವದಲ್ಲಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೆದಳು, ಮನಸ್ಸು ಮತ್ತು ದೇಹ ಸಶಕ್ತ, ಸದೃಢವಾಗಿದ್ದರೆ ಉತ್ತಮ ಶಿಣದ ಮೂಲಕ ಕಂಡ ಕನಸು ಸಾಧಿಸಬಹುದು. ಕಲಿಕೆಯ ಆಸಕ್ತಿ ವಿದ್ಯಾಥಿರ್ಗಳಲ್ಲಿ ಮತ್ತು ಕಲಿಸುವ ಅಭಿರುಚಿ ಶಿಕರಲ್ಲಿದ್ದಾಗಲೇ ಅದು ಕೌಶಲಯುತವಾಗಿ ಕೂಡಿಬರುತ್ತದೆ. ವಿದ್ಯಾಥಿರ್ಗಳಿಗೆ ಶಿಕರೇ ಆದರ್ಶ. ಅವರ ಜೀವನ ನಿರೂಪಣೆ ಪಾಲಕರ ಜತೆಗೆ ಶಿಕರಿಗೂ ಸೇರಿದೆ ಎಂದರು.
ಜಿಲ್ಲೆಗೆ ಇರುವ ವಿದ್ಯಾಕಾಶಿ ಹೆಸರು ಉಳಿಸುವ ಅಗತ್ಯವಿದೆ. 2023&24ನೇ ಸಾಲಿನ ಎಸ್ಸೆಸ್ಸೆಲ್ಸಿ ಲಿತಾಂಶ ಶೇ. 74ರಷ್ಟಾಗಿದೆ. ರಾಜ್ಯದಲ್ಲಿ 24 ರಿಂದ 22ನೇ ಸ್ಥಾನಕ್ಕೆ ಬಂದಿದೆ. ಇದು ನಾವು ಹೆಮ್ಮೆ ಪಡುವ ವಿಷಯವಲ್ಲ. ಪ್ರಸಕ್ತ ಸಾಲಿನಲ್ಲಿ ಇಡೀ ಜಿಲ್ಲೆ ಶೇ. 100ರಷ್ಟು ಲಿತಾಂಶ ಪಡೆಯಬೇಕು. ಇದಕ್ಕೆ ಜಿಲ್ಲಾಡಳಿತ ಸಹಕಾರ ನೀಡುತ್ತದೆ. 10ನೇ ವರ್ಗ ಕಲಿಸುವ ಪ್ರತಿ ಶಿಕ ಪ್ರತಿಜ್ಞೆ ಮಾಡಿ, ಲಿತಾಂಶಕ್ಕಾಗಿ ಪ್ರಮಾಣಿಕ ಪ್ರಯತ್ನ ಮಾಡಬೇಕು. 2024&25ರಲ್ಲಿ ನಮ್ಮ ಜಿಲ್ಲೆ ಎಸ್ಸೆಸ್ಸೆಲ್ಸಿ ಲಿತಾಂತಶದಲ್ಲಿ ಪ್ರಥಮ ಸ್ಥಾನ ಪಡೆಯುವಂತೆ ಎಲ್ಲರೂ ಕರ್ತವ್ಯ ನಿರ್ವಹಿಸಬೇಕು ಎಂದರು.
ಶಾಲಾ ಮಕ್ಕಳಿಗೆ ಸರ್ಕಾರದಿಂದ ಪೂರೈಸಿರುವ ಉಚಿತ ಸಮವಸ್ತ್ರ, ಪುಸ್ತಕ ವಿತರಿಸಿ ಶುಭ ಹಾರೈಸಿದರು. 8ನೇ ವರ್ಗದ ಇಂಗ್ಲಿಷ್ ಪಠ್ಯದ "ದಿ ಸ್ವಾನ ಆ್ಯಂಡ್ ದಿ ಪ್ರನ್ಸಿಸ್' ಎಂಬ ಬುದ್ಧನ ಕುರಿತ ಜಾನಪದ ನಾಟಕ ಬೋಧಿಸಿದರು. ವಿದ್ಯಾಥಿರ್ಗಳನ್ನು ವೇದಿಕೆಗೆ ಕರೆದು ಅವರನ್ನೇ ನಾಟಕದ ಪಾತ್ರಧಾರಿಗಳನ್ನಾಗಿ ಮಾಡಿ, ತಾವೂ ಸೂತ್ರದಾರರಾಗಿ ಶಿಕ ವೃತ್ತಿಯಲ್ಲಿ ಇರುವವರಿಗೆ ಮಾದರಿ ಆಗುವಂತೆ ಪಠ್ಯ ಬೋಧನೆ ಮಾಡಿದರು.
ಡೈಟ್ ಪ್ರಾಚಾಯೆರ್ ಜಯಶ್ರೀ ಕಾರೆಕರ, ಶಹರ ೇತ್ರ ಶಿಣಾಧಿಕಾರಿ ಅಶೋಕ ಸಿಂದಗಿ, ಬಿ.ಎಂ. ಬಡಿಗೇರ, ಮಂಜುನಾಥ ಅಡವೆರ, ಬಿ.ಬಿ. ದುಬ್ಬನಮರಡಿ, ನಫಿಜಾಬಾನು ದಾವಲಸಾಬನವರ, ಶಿವಲೀಲಾ ಕಳಸಣ್ಣವರ, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಇತರರು ಇದ್ದರು.
ಎಸ್.ಎಂ.ಹುಡೇದಮನಿ ಸ್ವಾಗತಿಸಿದರು. ಡಿಡಿಪಿಐ ಎಸ್.ಎಸ್.ಕೆಳದಿಮಠ ಪ್ರಸ್ತಾವಿಕವಾಗಿ ಮಾತನಾಡಿದರು. ಜಯಲಕ್ಷಿ$್ಮ ಎಚ್. ನಿರೂಪಿಸಿದರು. ಅಶೋಕ ಸಿಂದಗಿ ವಂದಿಸಿದರು.