ಗ್ಯಾರಂಟಿ ಜಾರಿಗೆ ವಿಶೇಷ ಅಭಿಯಾನ ನಡೆಸಿ

dhp.10.1(1) ( Collector, T. Bhubalan, Devarhipparagi, Guarantee Enforcement, Special Campaign,
ದೇವರಹಿಪ್ಪರಗಿ ನಾಡಕಚೇರಿ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಹಿಳೆಯರ ಕುಂದುಕೊರತೆಗಳನ್ನು ಆಲಿಸಿದರು.
Published on

ದೇವರಹಿಪ್ಪರಗಿ: ಸರ್ಕಾರದ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪುವಂತಾಗಬೇಕು. ಸಾರ್ವಜನಿಕ ಸೇವೆಯಲ್ಲಿ ಯಾವುದೇ ರೀತಿಯ ತೊಂದರೆಗಳಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದರು.

ಪಟ್ಟಣಕ್ಕೆ ಗುರುವಾರ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ತಹಸೀಲ್ದಾರ್ ಕಚೇರಿ, ನೂತನ ಪಟ್ಟಣ ಪಂಚಾಯಿತಿ ಕಟ್ಟಡ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.

ಸರ್ಕಾರ ಸಾರ್ವಜನಿಕರ ಸೇವೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇವುಗಳನ್ನು ಅನುಷ್ಟಾನಗೊಳಿಸುವುದರಲ್ಲಿ ಅಧಿಕಾರಿಗಳ ಪಾತ್ರ ಹಿರಿದಾಗಿದೆ. ಅದರ ಜತೆಯಲ್ಲಿ ಪ್ರಮುಖ ಐದು ಗ್ಯಾರಂಟಿ ಯೋಜನೆಗಳ ಕುರಿತು ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು. ಅರ್ಹ ಎಲ್ಲ ಫಲಾನುಭವಿಗಳಿಗೆ ತಲುಪುವಂತಾಗಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ಇನ್ನು ಮಿನಿ ವಿಧಾನಸೌಧ ನಿರ್ಮಿಸಲು ಎರಡು ಕಡೆ ಸ್ಥಳಾವಕಾಶ ಪರಿಶೀಲಿಸಲಾಗಿದೆ. ಹಂತಹಂತವಾಗಿ ಸರ್ಕಾರದ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು. ಪಟ್ಟಣ ಪಂಚಾಯಿತಿ ಕಟ್ಟಡ ಹಾಗೂ ಇನ್ನಿತರ ಸರ್ಕಾರಿ ಕಟ್ಟಡ ಕಾಮಗಾರಿ ಬೇಗ ಮುಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಬಂದಾಗ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದರು.

ರೈತ ಸಂಪರ್ಕ ಕೇಂದ್ರ, ನೆಮ್ಮದಿ ಕೇಂದ್ರ ಸೇರಿದಂತೆ ವಿವಿಧ ಕಡೆ ಭೇಟಿ ನೀಡಿ ಪರಿಶೀಲಿಸಿ, ತಹಸೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚಿಸಿದರು. ಇದೇ ಸಂದರ್ಭದಲ್ಲಿ ರೈತ ಸಂಘದವರು, ಸಾರ್ವಜನಿಕರು ನೀರಾವರಿ ಯೋಜನೆ ಜಾರಿ ಹಾಗೂ ಮೂತ್ರಿಗಳ ನಿರ್ಮಾಣದ ಕುರಿತು ತಮ್ಮ ಅಹವಾಲು ಸಲ್ಲಿಸಿದರು.

ತಹಸೀಲ್ದಾರ್ ಪ್ರಕಾಶ ಸಿಂದಗಿ, ಕೃಷಿ ಅಧಿಕಾರಿ ಎಚ್.ವೈ. ಸಿಂಗೆಗೋಳ, ಡಾ. ಯೋಗೇಶ, ಬಸವರಾಜ ಜಗಳೂರ, ಎನ್.ಎಸ್. ಭೂಸಗೊಂಡ, ಡಾ. ವೀಣಾ ಮದರಖಂಡಿ, ಪಿ.ಆರ್. ಉಮಚಗಿಮಠ, ರಾಮನಗೌಡ ಪಾಟೀಲ, ದಯಾನಂದ ಸಜ್ಜನ, ರಮೇಶ ವಾಲೀಕಾರ, ಅಕ್ಷತಾ ಹೊಂಗಲ, ಗಿರೀಶ ಕಟಕದೊಂಡ, ಐ.ಎಸ್. ಟಕ್ಕೆ, ಎಸ್.ಎಸ್. ಕತ್ನಳ್ಳಿ, ಎಲ್.ಡಿ. ಮುಲ್ಲಾ, ಗೀತಾ ಎಂ., ದಿಲೀಪಸಿಂಗ ದಶವಂತ, ಮಹಿಪತಿ ದೇಸಾಯಿ, ಸೋಮಶೇಖರ ತಾವರಖೇಡ, ಸುಧೀಂದ್ರಕುಮಾರ ಗುಮಾಸ್ತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net