

ಕಳಸ: ಕಳಸ ಎ ವಲಯ ಮರಸಣಿಗೆ ಕಾರ್ಯಕ್ಷೇತ್ರದಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮರಸಣಿಗೆ , ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಜ್ಞಾನವಿಕಾಸ ಮಹಿಳಾ ಕೇಂದ್ರಗಳು, ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣ ಘಟಕ ಹಾಗೂ ನವ ಜೀವನ ಸಮಿತಿ ಕಳಸ ಎ ವಲಯದ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಿತು. ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ವಿಶ್ವನಾಥ್ ಮರಸಣಿಗೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಜ್ಞಾನ ನಿಧಿ, ಸಹಾಯಧನ, ಜ್ಞಾನದೀಪ ಶಿಕ್ಷಕಿಯರ ಮಂಜೂರಾತಿ ಪತ್ರ, ಜಲಮಂಗಲ ಸಲಕರಣೆ ವಿತರಣೆ, ನವ ಜೀವನ ಸಮಿತಿ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಕಾಫಿ ಬೆಳೆಗಾರರಾದ ಮಕ್ಕಿತಲೆ ವರ್ಧಮಾನಯ್ಯ, ಯೋಜನಾಧಿಕಾರಿಗಳಾದ ನಾಗರಾಜ್ ಕುಲಾಲ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮುರಳಿದರ ಭಟ್, ಮರಸಣಿಗೆ ಗ್ರಾಪಂ ಅಧ್ಯಕ್ಷೆ ಹೇಮಾವತಿ, ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಎಮ್.ಎನ್.ರಘುನಾಥ ಯೋಜನಾಧಿಕಾರಿ ಸುರೇಶ್, ಪ್ರಕಾಶ್ ದೇಶಪಾಂಡೆ, ಅಜಿತ್‌ಕುಲಾಲ್, ಕ್ಯಾಪ್ಟನ್ ಕಿರಣ್ ಶೆಟ್ಟಿ, ಸಂಪತ್ ಕುಮಾರ್ ಇದ್ದರು.