

ಹುಬ್ಬಳ್ಳಿ : ಹುಣ್ಣಿಮೆ ಅಂಗವಾಗಿ ಉಚಿತ ಸಾಮೂಹಿಕ ಧ್ಯಾನ ಹಾಗೂ ಸತ್ಸಂಗ ಕಾರ್ಯಕ್ರಮವನ್ನು ಇಲ್ಲಿನ ನೃಪತುಂಗ ಬೆಟ್ಟ ಸಮೀಪದ ಪಿರಮಿಡ್ ಧ್ಯಾನ ಮಂದಿರದಲ್ಲಿ ಮಾ. 24ರಂದು ಸಂಜೆ 4 ರಿಂದ 7 ಗಂಟೆಯವರೆಗೆ ಆಯೋಜಿಸಲಾಗಿದೆ.
ಮೊದಲ ಬಾರಿಗೆ ಧ್ಯಾನಕ್ಕೆ ಬರುವವರಿಗೆ ಧ್ಯಾನದ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಹುಬ್ಬಳ್ಳಿ ಪಿರಮಿಡ್ ಧ್ಯಾನಿಗಳ ಸಂಘದ ಪ್ರಕಟಣೆ ತಿಳಿಸಿದೆ.