ಸಾಮೂಹಿಕ ಕುಂಕುಮಾರ್ಚನೆ

1 YLP
Published on

ಯಲ್ಲಾಪುರ: ತಾಲೂಕಿನ ಬೆಳಖಂಡ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರಾವಣ ಶುಕ್ರವಾರದ ಪ್ರಯುಕ್ತ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಜರುಗಿತು.

ದೇವಸ್ಥಾನದ ಪುರೋಹಿತ ವೇ.ಮಂಜುನಾಥ ಜೋಶಿ ಮಾರ್ಗದರ್ಶನದಲ್ಲಿ ಲಲಿತಾ ಸಹಸ್ರನಾಮ ಪಠಣದೊಂದಿಗೆ ಕುಂಕುಮಾರ್ಚನೆ ನೆರವೇರಿಸಲಾಯಿತು.
ಪ್ರಮುಖರಾದ ನಾರಾಯಣ ಭಟ್ಟ ಮರಿಯನಪಾಲ, ಪರಮೇಶ್ವರ ಕೋಣೆಮನೆ, ವೆಂಕಟರಮಣ ಭಟ್ಟ ಅಚ್ಚೆಕೇರಿ, ಸುಬ್ರಾಯ ಕೋಣೆಮನೆ, ಮಹಾಬಲೇಶ್ವರ ಹೆಗಡೆ ಕುಂಟೆಮನೆ, ಅರ್ಚಕ ನಾರಾಯಣ ಭಟ್ಟ, ಗಂಗಾ ಭಟ್ಟ, ಶಾಂತಾ ಕೋಣೆಮನೆ, ಪಾರ್ವತಿ ಭಟ್ಟ, ಗೀತಾ ಭಟ್ಟ, ಗಾಯತ್ರಿ ಭಟ್ಟ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net