

ಇಂಡಿ: ಪಟ್ಟಣದ ಬಸವ ಸಮಿತಿ ಸಹಯೋಗದಲ್ಲಿ ರಾಜ್ಯಮಟ್ಟದ ವಿಶೇಷ ಆಯ್ದ ವಚನಗಳ ಸಂಗ್ರಹ ಹಾಗೂ ಅವುಗಳ ಭಾವಾರ್ಥ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಪರಮಾನಂದ ಅಲಗೊಂಡ ತಿಳಿಸಿದರು.
ಪಟ್ಟಣದ ಖಾಸಗಿ ಹೋಟೆಲ್ ಆವರಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
12ನೇ ಶತಮಾನದ ಶರಣರ ವಚನಗಳಲ್ಲಿ ಇಡೀ ಜೀವನದ ಸತ್ಯತೆ ಇದೆ. ನಾನು ಕೆಲವೊಂದಿಷ್ಟು ವಚನಗಳನ್ನು ಓದಿದ್ದೇನೆ, ಇನ್ನಷ್ಟು ವಚನಗಳನ್ನು ಓದುವ ಮೂಲಕ ಅದರ ಭಾವಾರ್ಥ ಅರಿಯುವ ಇಚ್ಛೆ ಹೊಂದಿದ್ದೇನೆ. ಹೀಗಾಗಿ, ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ, ರಾಜಯೋಗ, ದಾಸೋಹ, ಸತ್ಯ-ಪರಮ ಸತ್ಯ, ದೈವೀ ನಿಯಮ, ಆಚಾರ- ಅನಾಚಾರ, ಸ್ಥಿತಪ್ರಜ್ಞೆ, ಸಾಮಾಜಿಕ ಸಮಾನತೆ, ಶುದ್ಧ ಸಂಕಲ್ಪ, ವೈರಾಗ್ಯ, ಮೂಢನಂಬಿಕೆ ಸೇರಿ ಇತ್ಯಾದಿಗಳ ಬಗ್ಗೆ ಶರಣರು ಹೇಳಿರುವ ವಚನಗಳನ್ನು ಸಂಗ್ರಹಿಸಿ, ವಿಭಾಗಿಸುವ ಸ್ಪರ್ಧೆ ಏರ್ಪಡಿಸಲು ಬಯಸಿದ್ದೇನೆ. ಒಬ್ಬರು ನೂರರಿಂದ 150 ವಚನಗಳನ್ನು ಮಾತ್ರ ಬರೆದು ಕಳುಹಿಸಬೇಕು. ಮಾ. 25ರ ಒಳಗಾಗಿ ತಾವು ಬರೆದ ವಚನಗಳನ್ನು ಪಟ್ಟಣದ ಶಾಂತೇಶ ನಗರದ ಶಿಕ್ಷಕ ಸಿ.ಬಿ. ತಾವರಖೇಡ, ಬೀರಪ್ಪನಗರ ಇಂಡಿ 586209 ಇಲ್ಲಿಗೆ ವಿಳಾಸಕ್ಕೆ ಕಳುಹಿಸಿಕೊಡಬೇಕೆಂದು ತಿಳಿಸಿದರು.
ಮಾಹಿತಿಗೆ 9535275105, 9845255706ಗೆ ಸಂಪರ್ಕಿಸಬಹುದು.