ಅಮೃತ ಉದ್ಯಾನಕ್ಕೆ ಮಣ್ಣು ಸಂಗ್ರಹ

19 GJD 4
Published on

ಗಜೇಂದ್ರಗಡ: ದೇಶಕ್ಕಾಗಿ ಬಲಿದಾನಗೈದ ಯೋಧರ ಸ್ಮರಣಾರ್ಥ ನಿರ್ಮಿಸಲಿರುವ ಉದ್ಯಾನಕ್ಕೆ ದೇಶದ ವಿವಿಧ ಕಡೆಗಳಿಂದ ಪವಿತ್ರ ಮಣ್ಣು ಸಂಗ್ರಹಿಸಲಾಗುತ್ತಿದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.

ತಾಲೂಕಿನ ಮ್ಯಾಕಲಝರಿ ಗ್ರಾಮದಲ್ಲಿ ಬಿಜೆಪಿ ರೋಣ ಮಂಡಲದ ವತಿಯಿಂದ ಭಾನುವಾರ ಆಯೋಜಿಸಿದ್ದ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ದೆಹಲಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕದ ಪಕ್ಕದಲ್ಲಿ ನಿರ್ಮಿಸುತ್ತಿರುವ ಅಮೃತ ಉದ್ಯಾನವನ್ನು ದೇಶದ ಶಕ್ತಿಶಾಲಿಯಾಗಿಸಬೇಕು ಎಂಬ ಉದ್ದೇಶದಿಂದ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನ ಆಯೋಜಿಸಲಾಗಿದೆ’ ಎಂದರು.

ಮುದಿಯಪ್ಪ ಕರಡಿ, ಭಾಸ್ಕರ ರಾಯಬಾಗಿ, ನೀಲಪ್ಪ ಗುರಿಕಾರ, ಅಶೋಕ ವನ್ನಾಲ, ಕನಕಪ್ಪ ಅರಳಿಗಿಡದ, ಉಮೇಶ ಚನ್ನು ಪಾಟೀಲ, ಡಿ.ಜಿ. ಕಟ್ಟಿಮನಿ, ಮಾಂತೇಶ ಪೂಜಾರ, ಅಂದಪ್ಪ ಅಂಗಡಿ, ಮುತ್ತಯ್ಯ ಕಾರಡಗಿಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net