ಅಗತ್ಯವಿರುವಷ್ಟು ಬೀಜ, ಗೊಬ್ಬರ ಸಂಗ್ರಹ

28KND-01
Published on

ಕುಂದಗೋಳ: ಕೃಷಿ ಇಲಾಖೆಯಲ್ಲಿ ಮುಂಗಾರಿಗೆ ಬೇಕಾಗುವ ಬೀಜ, ಗೊಬ್ಬರ ಸಂಗ್ರಹಣೆ ಇದ್ದು, ರೈತರು ಆತಂಕಕ್ಕೆ ಒಳಗಾಗಬಾರದು. ನಿಗದಿ ಮಾಡಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಬೀಜ ಗೊಬ್ಬರ ಮಾರಾಟ ಮಾಡುತ್ತಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕಿ ಭಾರತಿ ಮೆಣಸಿನಕಾಯಿ ತಿಳಿಸಿದರು.

ಪಟ್ಟಣದ ಕೃಷಿ ಇಲಾಖೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮೇ ತಿಂಗಳಲ್ಲಿ 57 ಮಿ.ಮೀ ವಾಡಿಕೆ ಮಳೆಗೆ 76 ಮಿ.ಮೀ ಮಳೆಯಾಗಿದ್ದು, ರೈತರು ಕೃಷಿ ಚಟುವಟಿಕೆ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದರು.

ಮುಂಗಾರು ಹಂಗಾಮಿನಲ್ಲಿ ಹತ್ತಿ, ಶೇಂಗಾ, ಮುಸುಕಿನಜೋಳ, ಹೆಸರು, ಸೋಯಾಅವರೆ ಹಾಗೂ ಉದ್ದು ಸೇರಿ ಒಟ್ಟು 50,321 ಹೆಕ್ಟೇರ್ ಬಿತ್ತನೆ ಕ್ಷೇತ್ರದ ಗುರಿ ಹೊಂದಲಾಗದೆ. ಬೇಡಿಕೆ ಅನ್ವಯ ಬೀಜ ಹಾಗೂ ರಸಗೊಬ್ಬರ ತೆರೆದಿರುವ 5 ಮಳಿಗೆಗಳಿವೆ. ಮಾರಾಟ ಮಳಿಗೆಗಳು/ ವಿತರಣೆ ಕೇಂದ್ರಗಳಿಗೆ ಒಬ್ಬ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

ರೈತ ಮುಖಂಡರಾದ ಅರವಿಂದಪ್ಪ ಕಟಗಿ, ಸೋಮರಾವ್ ದೇಸಾಯಿ, ಸಿದ್ದಪ್ಪ ಇಂಗಳಗಿ, ಬಾಬಾಜಾನ ಮಿಶ್ರಿಕೋಟಿ, ಯಶವಂತ ಬಾಳಿಕಾಯಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net