

ತೂಬಗೆರೆ: ಹೋಬಳಿಯ ಘಾಟಿ ಸುಬ್ರಹ್ಮಣ್ಯ ದೇವಾಲಯದ ಹುಂಡಿ ಹಣ ಎಣಿಕೆ ನಡೆಯಿತು. ಒಟ್ಟು 51, 76,495 ರೂ., ನಗದು ಹಾಗೂ ಬೆಳ್ಳಿ 1 ಕೆ.ಜಿ 94 ಗ್ರಾಂ, 2 ಗ್ರಾಂ ಚಿನ್ನ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ನಾರಾಯಣಸ್ವಾಮಿ, ಮುಜರಾಯಿ ಇಲಾಖೆ ತಹಸೀಲ್ದಾರ್ ಜೆ.ಜೆ.ಹೇಮಾವತಿ, ದೇವಾಲಯದ ಪ್ರಧಾನ ಅರ್ಚಕ ಆರ್. ಸುಬ್ರಮಣ್ಯ, ದೇವಾಲಯದ ನಂಜಪ್ಪ, ಕೆನರಾ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ದೇವಾಲಯದ ಸಿಬ್ಬಂದಿ ಇದ್ದರು.