ಫಾರೆನ್ಸಿಕ್ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ : ಪೆರ್ಲ ಅಗ್ನಿ ದುರಂತ

New Project (11)
Published on

ಕಾಸರಗೋಡು: ಭೀಕರ ಅಗ್ನಿ ಅನಾಹುತಕ್ಕೆ ತುತ್ತಾದ ಪೆರ್ಲ ಪೇಟೆಯಲ್ಲಿ ನೀರವ ಮೌನ ಆವರಿಸಿದ್ದು, ದುರಂತಕ್ಕೆ ಕಾರಣ ಪತ್ತೆಹಚ್ಚುವಲ್ಲಿ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಮಂಜೇಶ್ವರ ತಹಸೀಲ್ದಾರ್ ಸೇರಿದಂತೆ ಕಂದಾಯ, ವಿದ್ಯುತ್, ಸ್ಥಳೀಯಾಡಳಿತ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಪೊಲೀಸ್ ಹಾಗೂ ವಿದ್ಯುತ್ ಇಲಾಖೆಯ ಫಾರೆನ್ಸಿಕ್ ವಿಭಾಗದ ಅಧಿಕಾರಿಗಳೂ ಭೇಟಿ ನೀಡಿ ದುರಂತಕ್ಕೆ ಕಾರಣ ಪತ್ತೆಹಚ್ಚುವ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಪತ್ರಿಕಾ ವಿತರಕ, ವ್ಯಾಪಾರಿ ಗೋಪಿನಾಥ ಪೈ ಅವರ ಮಾಲೀಕತ್ವದ ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಅಂಗಡಿಗಳು ಶನಿವಾರ ತಡರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸುಟ್ಟುಹೋಗಿದ್ದವು. ಪ್ರವೀಣ್ ಅಟೋಮೊಬೈಲ್ ಸಂಸ್ಥೆಯೊಂದರಲ್ಲೇ 88 ಲಕ್ಷ ರೂ. ಮೌಲ್ಯದ ಸಾಮಗ್ರಿ ಉರಿದು ನಾಶಗೊಂಡಿವೆ. ಕಟ್ಟಡ ಇರುವ ಜಾಗದ ಬಗ್ಗೆ ನ್ಯಾಯಾಲಯದಲ್ಲಿ ದೀರ್ಘ ಕಾಲದಿಂದ ವ್ಯಾಜ್ಯ ಮುಂದುವರಿಯುತ್ತಿರುವ ಮಧ್ಯೆ ಏಕಾಏಕಿ ಕಟ್ಟಡ ಬೆಂಕಿಗಾಹುತಿಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ದುರಂತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಸಂಶಯಿಸಲಾಗಿದೆ.

ಈ ಮಧ್ಯೆ ಸುಟ್ಟುಕರಕಲಾಗಿರುವ ಸಾಮಗ್ರಿ ತೆರವುಗೊಳಿಸಲು ಪೊಲೀಸ್ ಇಲಾಖೆ ಸಂಬಂಧಪಟ್ಟವರಿಗೆ ಅನುಮತಿ ನೀಡಿದ್ದು, ಅಂಗಡಿ ಮಾಲೀಕರು ಕಾರ್ಯಾಚರಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net