ತಲಕಾವೇರಿಯಲ್ಲಿ ಪುಣ್ಯ ತೀರ್ಥ ಸಂಗ್ರಹಣೆ

Collection of holy places in Talakaveri
ಮಡಿಕೇರಿಯ ತಲಕಾವೇರಿಯಲ್ಲಿ ಪುಣ್ಯ ತೀರ್ಥ ಸಂಗ್ರಹ ಕಾರ್ಯ ನಡೆಯಿತು.
Published on

ನಾಪೋಕ್ಲು: ಭಾರತೀಯ ನೌಕದಳದ ಐಎನ್‌ಎಸ್ ತರಂಗಿಣಿ ಎಂಬ ಹಡಗು ದೇಶಾದ್ಯಂತ ಪುಣ್ಯಕ್ಷೇತ್ರಗಳಲ್ಲಿ ಸಂಚರಿಸುತ್ತಿದ್ದು, ಶುಕ್ರವಾರ ತಲಾಕಾವೇರಿಯಲ್ಲಿ ಪುಣ್ಯತೀರ್ಥ ಸಂಗ್ರಹಿಸಿತು.

ಮಡಿಕೇರಿಯ 19 ಕೆಎಆರ್ ಎನ್‌ಸಿಸಿ ಬೆಟಾಲಿಯನ್ ತಂಡ, ಸಿಬ್ಬಂದಿ ವರ್ಗ ಪದವಿ ಪೂರ್ವ ಕಾಲೇಜು, ಮೂರ್ನಾಡುವಿನ ಎನ್‌ಸಿಸಿ ಕೆಡೆಟ್‌ಗಳು, ಎನ್‌ಸಿಸಿ ಅಧಿಕಾರಿ ಕ್ಯಾಪ್ಟನ್ ಪಿ.ಎಂ.ಕಾವೇರಪ್ಪ ನೇತೃತ್ವದಲ್ಲಿ ತಲಕಾವೇರಿಯಲ್ಲಿ ಗುರುವಾರ ಪುಣ್ಯ ತೀರ್ಥ ಸಂಗ್ರಹ ಕಾರ್ಯ ನಡೆಯಿತು.

ಭಾರತೀಯ ನೌಕದಳದ ಐಎನ್‌ಎಸ್ ತರಂಗಿಣಿ ಎಂಬ ಹಡಗು ಗುಜರಾತ್‌ನಿಂದ ತನ್ನ ಯಾನ ಆರಂಭಿಸಿ ಅರಬ್ಬಿ ಸಮುದ್ರ, ಹಿಂದುಮಹಾಸಾಗರದ ಮೂಲಕ ಬಂಗಾಳ ಕೊಲ್ಲಿಯಲ್ಲಿ ತನ್ನ ಯಾನವನ್ನು ಕೊನೆಗೊಳಿಸುತ್ತದೆ. ಇದು ಪ್ರಯಾಣ ಬೆಳೆಸಿದ ಉದ್ದಗಲಕ್ಕೂ ಪುಣ್ಯ ಕ್ಷೇತ್ರಗಳಿಂದ ತೀರ್ಥ ಸಂಗ್ರಹಿಸಿ ತೆರಳುತ್ತಿದ್ದು, ತಲಕಾವೇರಿಯಲ್ಲಿ ತೀರ್ಥ ಸಂಗ್ರಹಿಸಲಾಯಿತು. ಸಂಗ್ರಹಿಸಿದ ಪುಣ್ಯತೀರ್ಥ ಭಾರತದಾದ್ಯಂತ ಸಂಚರಿಸಿ ಎಲ್ಲ ಭಾರತೀಯರಿಗೂ ಆರೋಗ್ಯ, ಸಮೃದ್ಧಿ, ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.

ಈ ಸಂದರ್ಭ ಸುಬೇದಾರ್ ದೇವದಾಸ್, ನಿಖಿಲ್ ಸೆಲ್ವ, ಎನ್‌ಸಿಸಿ ಸಿಬ್ಬಂದಿ ವರ್ಗ, ಕೆಡೆಟ್‌ಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net