ಅಧಿಕಾರಿಯಿಂದ ಹಣ ವಸೂಲಿ ಮಾಡಿ

maski kasapa
ದುರುಗರಾಜ ವಟಗಲ್
Published on

ಮಸ್ಕಿ: ಪಟ್ಟಣದ ಪುರಸಭೆ ಹಿಂದಿನ ಮುಖ್ಯಾಧಿಕಾರಿ ರಡ್ಡಿ ರಾಯನಗೌಡ ಅವರನ್ನು ಪೀಠೋಪಕರಣ ಖರೀದಿಯಲ್ಲಿ ಕರ್ತವ್ಯ ಲೋಪ, ಅಧಿಕಾರ ದುರುಪಯೋಗ ಹಿನ್ನಲೆಯಲ್ಲಿ ಅಮಾನತು ಮಾಡಿದರೆ ಸಾಲದು ಅವರಿಂದ ಹಣ ವಸೂಲಿ ಮಾಡಬೇಕು ಎಂದು ಕರವೇ (ನಾರಾಯಣ ಗೌಡ ) ಬಣದ ಮಸ್ಕಿ ತಾಲೂಕು ಅಧ್ಯಕ್ಷ ದುರುಗರಾಜ ವಟಗಲ್ ಒತ್ತಾಯಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಡ್ಡಿ ರಾಯನಗೌಡ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿ ಅವ್ಯವಹಾರ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತು ಮಾಡಿದ್ದು, ಹಣವನ್ನೂ ವಸೂಲಿ ಮಾಡಬೇಕು. ಅಲ್ಲದೆ ಕೆಆರ್‌ಐಡಿಎಲ್ ಅಧಿಕಾರಿ ಅನಿಲ್ ಕುಮಾರ ಗೋಖಲೆ ಅವರು ಕೂಡ ಶಾಮೀಲಾಗಿದ್ದು, ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರವೇ ಜಿಲ್ಲಾ ಅಧ್ಯಕ್ಷ ಡಿಶ್ ಗಂಗಣ್ಣ, ಎಚ್. ಮೌನೇಶ ಹಸಮಕಲ್, ರಾಮಕೃಷ್ಣ ಭಜಂತ್ರಿ, ಬಸವರಾಜ ವಿಶ್ವಕರ್ಮ, ಅಮರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net