

ಗುಳೇದಗುಡ್ಡ : ಆಸ್ತಿ ತೆರಿಗೆ, ನೀರಿನ ಕರ ವಸೂಲಿ, ಉದ್ಯಮ ಪರವಾನಗಿ, ಮಳಿಗೆಗಳ ಬಾಡಿಗೆ ಸೇರಿ ಪುರಸಭೆಗೆ ಬರುವ ಇತರ ಕರಗಳನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಬೇಕೆಂದು ಅಧಿಕಾರಿಗಳಿಗೆ ಆಡಳಿತಾಧಿಕಾರಿ, ಜಿಲ್ಲಾ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೂಚಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಯಲ್ಲವ್ವ ಗೌಡರ ಅವರ ಆಡಳಿತ ಅವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪುರಸಭೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ನಗರದ ಬೀದಿ ದೀಪಗಳ ನಿರ್ವಹಣೆಗಾಗಿ ಟೆಂಡರ್ ಕರೆಯಬೇಕು. ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸುವಂತೆ ಸಲಹೆ ನೀಡಿದರು.
ಮುಖ್ಯಾಧಿಕಾರಿ ಎನ್.ಎಂ. ಕಂದಗಲ್ಲ, ಮ್ಯಾನೇಜರ್ ರಮೇಶ ಪದಕಿ, ಕುಮಾರ ತಟ್ಟಿಮಠ, ಶಿವಾನಂದ ಆಲೂರ, ಬಸವರಾಜ ಬಳಗಾನೂರ, ಯಲ್ಲಪ್ಪ ಜೋಗಿ, ವಿರೂಪಾಕ್ಷಪ್ಪ ಚೌಡಿ, ರತ್ನಾ ಚಂದರಗಿ, ಟಿ.ಎಸ್. ಗಾಜಿ, ಅನಿಲ ಕಪಾಟೆ, ಬಡೆಸಾಬ ಹುಲ್ಲಿಕೇರಿ, ಹುಲಗಪ್ಪ ಚಲವಾದಿ, ಜ್ಯೋತಿ ಪೂಜಾರ, ಆನಂದ ಯರಗಟ್ಟಿ, ಐ.ಬಿ. ಮೆಲ್ದಾಪುರ ಇತರರಿದ್ದರು.