ಕಳಸದಲ್ಲಿ ಕುಸಿದ ಕಟ್ಟಡ

build
ಕಳಸದಲ್ಲಿ ಕಟ್ಟಡ ಕುಸಿದಿರುವುದು.
Published on

ಕಳಸ: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಕಟ್ಟಡ ಬುಧವಾರ ಬೆಳಗ್ಗೆ ಕುಸಿದಿದ್ದು, ಜನರು ಹೊರಗೆ ಓಡಿಬಂದು ಅಪಾಯದಿಂದ ಪಾರಾಗಿದ್ದಾರೆ.

ರತ್ನಮ್ಮ ಎಂಬುವರ ಹಳೆಯ ಕಟ್ಟಡದಲ್ಲಿ ನಾಲ್ಕು ಮಳಿಗೆಗಳನ್ನು ಬಾಡಿಗೆಗೆ ಕೊಡಲಾಗಿತ್ತು. ಇದರಲ್ಲಿ ಬ್ಯೂಟಿ ಪಾರ್ಲರ್, ಸ್ಟುಡಿಯೋ, ಬೈಕ್ ಬಿಡಿ ಭಾಗಗಳ ಅಂಗಡಿ ಹಾಗೂ ಒಂದು ಕುಟುಂಬ ವಾಸವಿತ್ತು. ಹಳೆಯ ಕಟ್ಟಡ ಈ ಹಿಂದೆಯೇ ಬಿರುಕುಬಿಟ್ಟಿತ್ತು. ಬುಧವಾರ ಕಟ್ಟಡದಲ್ಲಿ ಶಬ್ದ ಕೇಳಿದ ಕೂಡಲೇ ಅದರಲ್ಲಿದ್ದವರು ಹೊರಗಡೆ ಓಡಿ ಬಂದರು. ಕಟ್ಟಡದ ಒಂದು ಭಾಗ ಕುಸಿದಿದೆ. ಕಟ್ಟಡದಲ್ಲಿದ್ದ ಬಾಡಿಗೆದಾರರು ಬೇರೆಡೆ ಹೋಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net