ಸೋಮೇಶ್ವರದ ದೇವಸ್ಥಾನ ದ್ವಾರ ಮಂಟಪ ಕುಸಿತ

15 lxr 4
Published on

ಲಕ್ಷ್ಮೇಶ್ವರ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರದ ದೇವಸ್ಥಾನದ ಉತ್ತರ ದ್ವಾರದ ಮಂಟಪ ಮತ್ತು ದಕ್ಷಿಣ ಭಾಗದ ಆವರಣ ಗೋಡೆ ಸತತ ಮಳೆಗೆ ಕುಸಿದಿದೆ.

ಕಳೆದ ಐದಾರು ವರ್ಷಗಳ ಹಿಂದೆ ಡಾ. ಸುಧಾಮೂರ್ತಿ ಅವರು ಇನ್ಪೋಸಿಸ್ ಫೌಂಡೇಷನ್ ವತಿಯಿಂದ 5 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನ ಜೀಣೋದ್ಧಾರಗೊಳಿಸಿದ್ದರು. ಉತ್ತರ ದ್ವಾರದ ಮಂಟಪ ಮಾತ್ರ ದುರಸ್ತಿಯಾಗಿರಲಿಲ್ಲ. ಈ ವೇಳೆ ಸುಧಾಮೂರ್ತಿ ಅವರು ಈ ಮಂಟಪ ಜೀಣೋದ್ಧಾರಕ್ಕೆ ಬೇಕಾಗುವ ಒಟ್ಟು ಮೊತ್ತದ ಶೇ. 90 ಹಣ ಭರಿಸುವುದಾಗಿ, ಉಳಿದ ಶೇ. 10ರಷ್ಟು ಹಣ ಭಕ್ತರು ಮತ್ತು ದೇವಸ್ಥಾನ ಕಮಿಟಿ ಸೇರಿಸಿ ಕೆಲಸ ಪ್ರಾರಂಭಿಸೋಣ ಎಂದಿದ್ದರು. ಆದರೆ, ಐದಾರು ವರ್ಷ ಕಳೆದರೂ ಈ ಬಗ್ಗೆ ಯಾವುದೇ ಪ್ರಕ್ರಿಯೆ ನಡೆಯದ್ದರಿಂದ ಗುರುವಾರ ಮಂಟಪ ನೆಲಕಚ್ಚಿದೆ. ಮಂಟಪ ಮತ್ತು ಆವರಣ ಗೋಡೆ ಕುಸಿದಿರುವುದು ಸುಂದರವಾದ ದೇವಸ್ಥಾನಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net