ಕಲಿಕಾ ಬೆಳವಣಿಗೆಗಾಗಿ ಗಣಿತ ಕಲಿಕಾ ಆಂದೋಲನ ಸಹಾಕಾರಿ

kalika andolana
Published on

ಮಡಿಕೇರಿ: ಮಕ್ಕಳ ಕಲಿಕಾ ಬೆಳವಣಿಗೆಗಾಗಿ ಶೈಕ್ಷಣಿಕ ಕ್ರೀಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲು ಗಣಿತ ಕಲಿಕಾ ಆಂದೋಲನ ಸಹಾಯವಾಗುತ್ತದೆ ಎಂದು ಅಕ್ಷರ ಫೌಂಡೇಶನ್ ವಿಭಾಗೀಯ ವ್ಯವಸ್ಥಾಪಕ ಅಂಜಲಿನ ಗ್ರೇಗರಿ ತಿಳಿಸಿದರು.

ಕೊಡಗು ಜಿಲ್ಲೆಯ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಸಮುದಾಯ, ಶೈಕ್ಷಣಿಕ ಸ್ವಯಂ ಸೇವಕರು, ಗ್ರಾಮ ಪಂಚಾಯತ್ ಮಟ್ಟದ ಶೈಕ್ಷಣಿಕ ತಂಡದ ನಾಯಕರು ಹಾಗೂ ಅಕ್ಷರ ಫೌಂಡೇಶನ್ ಸಹಭಾಗಿತ್ವದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣವನ್ನು ಪಾಲ್ಗೊಂಡು ಮಾತನಾಡಿದರು.

ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳ ಗುಣಾತ್ಮಕ ಕಲಿಕೆಗಾಗಿ ಹಾಗೂ ಮಕ್ಕಳು ಗಣಿತ ವಿ?ಯವನ್ನು ಸರಳವಾಗಿ, ಅನುಭವಾತ್ಮಕವಾಗಿ ಕಲಿಯಲು ಜಿಲ್ಲೆಯ ಪ್ರತಿ ಶಾಲೆಗಳಿಗೆ ಗಣಿತ ಕಿಟ್ ನೀಡುವುದರ ಮೂಲಕ ಗಣಿತ ಕಲಿಕಾ ಆಂದೋಲನ ಅನು?್ಠಾನಗೊಂಡಿದೆ. ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಗಳನ್ನು ೪ನೇ ತರಗತಿಯಿಂದ ೬ನೇ ತರಗತಿಯ ಮಕ್ಕಳಿಗೆ ಒಟ್ಟು ೧೦೨ ಗ್ರಾಮ ಪಂಚಾಯತಿಗಳಲ್ಲಿ ಮಾಡಲಾಗಿದೆ. ಸುಮಾರು ೭೬೦೦ ಮಕ್ಕಳು ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಶಾಲಾ ಪರಿಸರ ಹಾಗೂ ಸಮಗ್ರವಾದ ಮಕ್ಕಳ ಕಲಿಕಾ ಬೆಳವಣಿಗೆಗಾಗಿ ಶೈಕ್ಷಣಿಕ ಕ್ರೀಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ. ಬಹುಮುಖ್ಯವಾಗಿ ಶಾಲಾ ವರದಿಯು ಮಕ್ಕಳ ಕಲಿಕಾ ಮಟ್ಟವನ್ನು ಉತ್ತಮ ಪಡಿಸಲು ಗಣಿತ ಬೋಧಿಸುವ ಶಿಕ್ಷಕರಿಗೆ, ಮುಖ್ಯಶಿಕ್ಷಕರಿಗೆ ಉಪಯುಕ್ತವಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಂಗದಾಮಪ್ಪ, ಪ್ರಮುಖರಾದ ಚಂದ್ರಕಾಂತ ಗ್ರಾಮ ಪಂಚಾಯತ್ ಮಟ್ಟದ ಗಣಿತ ಸ್ಪರ್ಧೆಗಳ ಜಿಲ್ಲಾ ವರದಿ ಬಿಡುಗಡೆ ಮಾಡಿದರು.

ಕಾರ್ಯನಿರ್ವಾಹಕ ಅಧಿಕಾರಿ ಅಪ್ಪಣ್ಣ ಅಪಟ್ಟೀರ, ಮಾಯಮುಡಿ ಗ್ರಾ.ಪಂ.ಅಧ್ಯಕ್ಷ ಟಾಟು ಮೊಣ್ಣಪ್ಪ, ಅಕ್ಷರ ಫೌಂಡೇಶನ್ ಜಿಲ್ಲಾ ಸಂಯೋಜಕ ಕುಮಾರಸ್ವಾಮಿ ಇತರರಿದ್ದರು. ವಿಚಾರ ಸಂಕಿರಣದಲ್ಲಿ ೨೫ ಶಾಲೆಯ ಮುಖ್ಯಶಿಕ್ಷಕರು, ೨೫ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿ.ಡಿ.ಒ, ಇಒ, ಬಿಇಒ, ಬಿಆರ್‌ಸಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net