ಪ್ಲಾಸ್ಟಿಕ್‌ಮುಕ್ತ ನಗರವನ್ನಾಗಿಸಲು ಸಹಕರಿಸಿ: ಪರಿಸರ ಅಭಿಯಂತರ ಅಂಬರೀಶ ಮನವಿ

bly
ಹೂವಿನಹಡಗಲಿಯ ಪುರಸಭೆ ಕಾರ್ಯಾಲಯದ ಎಂ.ಪಿ.ಪ್ರಕಾಶ ಸಭಾಂಗಣದಲ್ಲಿ ಪ್ಲಾಸ್ಟಿಕ್ ಉತ್ಪನ್ನ ನಿಷೇಧದ ಕುರಿತು ಗುರುವಾರ ಹಮ್ಮಿಕೊಂಡಿದ್ದ ವರ್ತಕರ ಮತ್ತು ಉದ್ಯಮಿದಾರರ ಸಭೆಯಲ್ಲಿ ಪರಿಸರ ಅಭಿಯಂತರ ಅಂಬರೀಶ ಮಾತನಾಡಿದರು.
Published on

ಹೂವಿನಹಡಗಲಿ: ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸದಂತೆ ಸರ್ಕಾರ ಆದೇಶ ಹೊರಡಿಸಿದ್ದು, ಎಲ್ಲ ಅಂಗಡಿ ಮಾಲೀಕರು ಮತ್ತು ವ್ಯಾಪಾರಿಗಳು ಯಾವುದೇ ರೀತಿಯ ಪ್ಲಾಸ್ಟಿಕ್ ಉತ್ಪನ್ನ ಉಪಯೋಗಿಸಬಾರದು ಎಂದು ಪರಿಸರ ಅಭಿಯಂತರ ಅಂಬರೀಶ ಹೇಳಿದರು.


ಪಟ್ಟಣದ ಪುರಸಭೆ ಕಾರ್ಯಾಲಯದ ಎಂ.ಪಿ.ಪ್ರಕಾಶ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವರ್ತಕರ ಮತ್ತು ಉದ್ಯಮಿದಾರರ ಸಭೆ ಉದ್ದೇಶಿಸಿ ಗುರುವಾರ ಮಾತನಾಡಿದರು. ಈಗಾಗಲೇ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಅಂಗಡಿ ಮಾಲೀಕರು ಮತ್ತು ಉದ್ಯಮಿದಾರರು ಅವುಗಳನ್ನು ಬಳಸುತ್ತಿರುವುದು ಕಂಡು ಬಂದರೆ ದಂಡ ವಿಧಿಸಲಾಗುವುದು ಎಂದರು.


ಕಿರಿಯ ಆರೋಗ್ಯ ನಿರೀಕ್ಷಕ ಸೋಮಶೇಖರ್ ಮಾತನಾಡಿದರು. ಪ್ರಭಾರಿ ಮುಖ್ಯಾಧಿಕಾರಿ ಸಂತೋಷ್‌ಕುಮಾರ್, ಹಿರಿಯ ಆರೋಗ್ಯ ನೀರೀಕ್ಷಕ ಮಾರುತಿ ಕೆ, ಸ್ವಚ್ಛ ಭಾರತ ಅಭಿಯಾನದ ರಾಯಭಾರಿ ಹೇಮಾ ಜೈನ್ ಹಾಗೂ ಅಂಗಡಿ ಮಾಲೀಕರು, ವರ್ತಕರು ಮತ್ತು ಉದ್ಯಮಿದಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net