ರಾಜ್ಯದಲ್ಲಿ ಮುಂದುವರಿದ ಶೀತ ಗಾಳಿ ಎಚ್ಚರಿಕೆ: 23 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಕುಸಿತ

Front 1 Karnataka Cold
Published on

ಬೆಂಗಳೂರು: ರಾಜ್ಯದ 6 ಜಿಲ್ಲೆಗಳಲ್ಲಿ ಮುಂದಿನ 3 ದಿನ ತೀವ್ರವಾಗಿ ಶೀತ ಗಾಳಿ(ಕೋಲ್ಡ್​ವೇವ್​) ಬೀಸಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.

ಬೀದರ್​, ಕಲಬುರಗಿ, ವಿಜಯಪುರದಲ್ಲಿ ಡಿ.18 ಮತ್ತು ಡಿ.19ರಂದು ತೀವ್ರವಾಗಿ ಶೀತ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಇಲಾಖೆ, ರೆಡ್​ ಅರ್ಲಟ್​ ಕೊಟ್ಟಿದೆ. ಈ ಸಂದರ್ಭದಲ್ಲಿ ಮೇಲಿನ ಜಿಲ್ಲೆಗಳಲ್ಲಿ ತಾಪಮಾನ 6ರಿಂದ 8 ಡಿ.ಸೆ. ಉಷ್ಣಾಂಶ ದಾಖಲಾಗಲಿದೆ. ಅಲ್ಲದೆ, ಬಾಗಲಕೋಟೆ, ರಾಯಚೂರು, ಯಾದಗಿರಿಯಲ್ಲಿ ಮುಂದಿನ 2 ದಿನ ಮತ್ತಷ್ಟು ಥಂಡಿ ವಾತಾವರಣ ಉಂಟಾಗುವ ಸಂಭವ ಇರುವುದರಿಂದ ಯೆಲ್ಲೋ ಅರ್ಲಟ್​ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ 10 ಡಿ.ಸೆ.ಉಷ್ಣಾಂಶ ಇರಲಿದೆ. ಇದು ವಾಡಿಕೆಗಿಂತ 4-5 ಡಿ.ಸೆ.ಉಷ್ಣಾಂಶ ಕಡಿಮೆ ಇರಲಿದೆ. ರಾಜ್ಯದ 23 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ 3ರಿಂದ 5 ಡಿ.ಸೆ.ಉಷ್ಣಾಂಶ ಕುಸಿತವಾಗಿದೆ. ಇದರಿಂದಾಗಿ ಮೈ ನಡುಗುವ ಚಳಿ ಕಾಣಿಸಿಕೊಂಡಿದೆ. ಡಿ.20ರಿಂದ ಕನಿಷ್ಠ ತಾಪಮಾನದಲ್ಲಿ ಇಳಿಕೆಯಾಗಿದ್ದ ಉಷ್ಣಾಂಶ ಹೆಚ್ಚಳವಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಡಿ.17ರಂದು ಕನಿಷ್ಠ ತಾಪಮಾನ ವಿವರ

ಜಿಲ್ಲೆ                          ಉಷ್ಣಾಂಶ

ವಿಜಯಪುರ                  8

ಬೀದರ್​                      8.2

ಬೆಳಗಾವಿ                    9.2

ಧಾರವಾಡ                    10

ಬಾಗಲಕೋಟೆ               11

ದಕ್ಷಿಣ ಕರ್ನಾಟಕದ ಭಾಗದ ಜಿಲ್ಲೆಗಳಗಿಂತ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಗಣನೀಯವಾಗಿ ಉಷ್ಣಾಂಶ ಕುಸಿದಿದೆ. ಇದು ವಾಡಿಕೆಗಿಂತ 5-6 ಡಿ.ಸೆ.ಕಡಿಮೆ ದಾಖಲಾಗುತ್ತಿದೆ. ಆದ್ದರಿಂದ, ಆ ಭಾಗಗಗಳಲ್ಲಿ ತೀವ್ರ ಚಳಿ ಕಾಣಿಸಿಕೊಂಡಿದೆ.

| ಸಿ.ಎಸ್​.ಪಾಟೀಲ್​. ಹವಾಮಾನ ಇಲಾಖೆ ನಿರ್ದೇಶಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net